ಎಸ್ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಮೊದಲ ವರ್ಷದ ದೀಕ್ಷಾರಂಭ
ಕನಕಪುರದಲ್ಲಿ ಸ್ಥಾಪಿತವಾದ ನೂತನ ಶ್ರೀ ಎಸ್ ಕರಿಯಪ್ಪ ಕೃಷಿ ಮಹಾವಿದ್ಯಾಲಯದಲ್ಲಿ ಮೊದಲ ವರ್ಷದ ದೀಕ್ಷಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾಜಿ ರಾಜ್ಯಸಭಾ ಸದದ್ಯರಾದ ಡಿ ಕುಪ್ರೇಂದ್ರ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಡಾ. ಕೆ ಎಮ್ ಹರೀಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ರೂರಲ್ ಕಾಲೇಜಿನ ಅಧ್ಯಕ್ಷರಾದ ಹೆಚ್ ಕೆ ಶ್ರೀಕಂಠ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿದ ಡಿ ಕುಪ್ರೇಂದ್ರ ರೆಡ್ಡಿ ಅವರು “ನೀವು ಕೃಷಿ ವಿಜ್ಞಾನ ಕೋರ್ಸ್ ಪಡೆದುಕೊಂಡಿದ್ದೀರಿ, ಇದು ಸಾಮ್ಯಾನದಲ್ಲ ಡಾಕ್ಟರ್, ಇಂಜಿನಿಯರ್‌ಗಳು ಇದರ ಮುಂದೆ ಯಾರು ಇಲ್ಲ. 16ರಿಂದ 18% ಎಕಾನಮಿಯನ್ನು ಈ ದೇಶಕ್ಕೆ ಕೊಡುವಂತಹದು ಅಗ್ರಿಕಲ್ಚರ್. ಏನಪ್ಪ ಕೃಷಿ ಎಂದರೆ.. ಮಣ್ಣಿನ ಫಲವತ್ತತೆಯನ್ನು ನೀವು ಅರ್ಥ ಮಾಡಿಕೊಳ್ಳವಂತಹದ್ದು, ನೀರಿನಲ್ಲಿರುವಂತಹ ಲವಣವನ್ನ ಅರ್ಥಮಾಡಿಕೊಳ್ಳವಂತಹದ್ದು. ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಕೃಷಿಯನ್ನ ಅಭಿವೃದ್ದಿಪಡಿಸಬೇಕು, ಏಕೆಂದರೆ ಬೇರೆ ದೇಶಗಳಿಗೆ ಹೊಲಿಸಿದರೆ ನಮ್ಮ ದೇಶದ ಕೃಷಿ ಹೆಚ್ಚು ಅಭಿವೃದ್ದಿಯಾಗಿಲ್ಲ” ಎಂದರು.
ಡಾ. ಕೆ ಎಮ್ ಹರೀಕುಮಾರ್ ಮಾತನಾಡಿ “ಈಗ ಬೆಳೆಯುತ್ತಿರುವ ಜನಸಂಖ್ಯೆಗೆ 2050 ಇಸವಿಗೆ ಸುಮಾರು 9.8 ಬಿಲಿಯನ್ ಜನ ಸಂಖ್ಯೆ ಹೆಚ್ಚಾಗುತ್ತದೆ, ಸದ್ಯಕ್ಕೆ ಏನು ಬೆಳೆಯುತ್ತೇವೆ ಅದಕ್ಕೂ 56 ಪಟ್ಟು ಹೆಚ್ಚು ಬೆಳೆ ಬೆಳೆಯ ಬೇಕಾಗುತ್ತದೆ. ಹಾಗಾಗಿ ರೈತರಿಂದ ಆಹಾರ ಉತ್ಪಾದನೆ ಹೆಚ್ಚಾಗುತ್ತದೆ. ಕೃಷಿ ವಿಷಯವನ್ನು ಅಧ್ಯಾಯನ ಉಪಯೋಗವಿದೆ“ ಎಂದರು.
ಹೆಚ್ ಕೆ ಶ್ರೀಕಂಠ ಅವರು ಮಾತನಾಡಿ “ನಮ್ಮ ಕೃಷಿ ಕಾಲೇಜಿನ ನುರಿತ ಅಧ್ಯಾಪಕರಿದ್ದಾರೆ ಹಾಗೂ ಕೋರ್ಸ್ಗೆ ಬೇಕಾದ ಸವಲತ್ತುಗಳನ್ನು ಮಾಡಿಕೊಟ್ಟೆದ್ದೇವೆ, ನನಗೂ ಕೃಷಿಯ ಮೇಲೆ ಹೆಚ್ಚನ ಆಸಕ್ತಿ ಇರುವುದರಿಂದ ನಮ್ಮ ಕಾಲೇಜಿಗೆ ಕೃಷಿ ವಿಶ್ವವಿದ್ಯಾಲಯವನ್ನು ತಂದಿದ್ದೇನೆ“ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ನೂತನವಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಅವರ ಪೋಷಕರು ಹಾಗೂ ಹಿತೈಷಿಗಳು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ. ಟಿ ಕೆ. ಸಿದ್ದರಾಮೇಗೌಡ ಅವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ದೇಶ ವಿವರಿಸಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಪ್ರೋ. ರಂಗನಾಯಕಮ್ಮ (ಉಪಾದ್ಯಕ್ಷ, ಆರ್ ಇ ಎಸ್), ಸೂರ್ಯನಾರಾಯಣ (ಜಂಟಿ ಕಾರ್ಯದರ್ಶಿ), ಪುಟ್ಟಸ್ವಾಮಿ (ಕಾರ್ಯದರ್ಶಿ), ಎಸ್ ಸಿ ಮಂಜುನಾಥ್ (ಖಜಾಂಚಿ) ಅವರು ಭಾಗವಹಿಸಿದರು.
ಡಾ. ಟಿ ಬಿ ಪುಟ್ಟರಾಜು (ಪ್ರಾಧ್ಯಾಪಕ ಹಾಗೂ ಆಡಳಿತಾಧಿಕಾರಿ) ಹಾಗೂ ಡಾ. ಟಿ ಕೆ. ಸಿದ್ದರಾಮೇಗೌಡ (ಡೀನ್. ಅಗ್ರೀಕಲ್ಚ್ರಲ್ ಕಾಲೇಜು) ಅವರು ಕಾರ್ಯಕ್ರಮವನ್ನು ಆಯೋಜಿಸಿದರು.

