ಅಪ್ಪನ ತ್ಯಾಗ, ತಾಳ್ಮೆ, ಮಗನ ಪ್ರೇಮ ಕಥೆಯ ಮೂವಿ ಜೊತೆಯಾಗಿ ಹಿತವಾಗಿ
ಜೊತೆಯಾಗಿ ಹಿತವಾಗಿ ಸಿನಿಮಾ ವಿಮರ್ಶೆ
ರೇಟಿಂಗ್ : 3/5
ಚಿತ್ರ : ಜೊತೆಯಾಗಿ ಹಿತವಾಗಿ
ನಿರ್ದೇಶಕ : ಎ ಆರ್ ಕೃಷ್ಣ
ನಿರ್ಮಾಣ : ಶ್ರೀರತ್ನ ಫಿಲಂ ಕಂಪನಿ
ತಾರಾಗಣ : ಅಗಸ್ತ್ಯ, ಸುವಾರ್ತ, ಆನಂದ್ ನೀನಾಸಂ
ಭೂಮಿಕಾ ದೇಶಪಾಂಡೆ. ಚೇತನ್ ದುರ್ಗ ಮುಂತಾದವರು…
————————————————————————————
ಶಿವಣ್ಣ ನಟನೆಯ ಮೊದಲ ಸಿನಿಮಾ ಆನಂದ್ ಚಿತ್ರದ “ಜೊತೆಯಾಗಿ ಹಿತವಾಗಿ” ಜನಪ್ರಿಯ ಹಾಡಿನ ಸಾಲನ್ನು ಟೈಟಲ್ ಇರುವ ಚಿತ್ರ ಬಿಡುಗಡೆ ಆಗಿದೆ. ಎ ಆರ್ ಕೃಷ್ಣ ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಒಂದೊಳ್ಳೆ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ನಾಯಕ ಚಿಕ್ಕ ವಯಸ್ಸಿನಲ್ಲಿರುವಾಗಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾನೆ, ತಂದೆ (ಆನಂದ್ ನೀನಸಾಂ) ಮತ್ತೊಂದು ಮದುವೆಯಾಗದೆ ಮಗನನ್ನು ಪ್ರೀತಿಯಿಂದ ಯಾವುದೇ ಕೊರತೆ ಬಾರದಂತೆ ಬೆಳೆಸುತ್ತಾರೆ. ನಾಯಕನ ತಂದೆ ಮಾತು ಕೊಟ್ಟರೆ ಅಂದೆ ರೀತಿ ನಡೆದುಕೊಳ್ಳಬೇಕು, ಭೇಟಿಯಾಗಲು ಟೈಮ್ ಹೇಳಿದರೆ ಅಂದೇ ಟೈಮ್ಗೆ ಭೇಟಿ ಮಾಡಬೇಕು ಅಂತಹ ಶಿಸ್ತಿನ ಜೀವನ ನಡೆಸುತ್ತಿರುತ್ತಾರೆ.
ನಾಯಕ ಕರಣ್ ( ಅಗಸ್ತ್ಯ) ಚೆನ್ನಾಗಿ ಓದಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅದೇ ಕಂಪನಿಗೆ ನಾಯಕಿ ಕಾವ್ಯ(ಸುವಾರ್ತ) ಕೆಲಸಕ್ಕೆ ಸೇರುತ್ತಾಳೆ, ಇವರಿಬ್ಬರ ಮಧ್ಯೆ ಲವ್ ಆಗುತ್ತದೆ ಆದರೆ ಒಬ್ಬರನೊಬ್ಬರು ಹೇಳಿಕೊಳ್ಳುವುದಿಲ್ಲ.
ನಾಯಕನ ತಂದೆ ಮಗನಿಗೆ ಮದುವೆ ಮಾಡಬೇಕೆಂದು ಹುಡುಗಿ ನೋಡುತ್ತಾರೆ, ಆದರೆ ಕರಣ್ಗೆ ಕಾವ್ಯ ಮೇಲೆ ಲವ್ ಇರುವುದರಿಂದ ತಂದೆ ತೋರಿಸದ ಹುಡುಗಿ ಮೇಲೆ ಇಷ್ಟವಿಲ್ಲದಿದ್ದರೂ ಇಷ್ಟವಿದೆ ಎನ್ನುವ ಹಾಗೇ ನಟನೆ ಮಾಡುತ್ತಾನೆ.
ನಂತರ ಕರಣ್ ಕಾವ್ಯಳನ್ನು ಪ್ರಪೋಸ್ ಮಾಡುತ್ತಾನೆ ಆದರೆ ಕಾವ್ಯಗೆ ಕರಣ್ ಮೇಲೆ ಇಷ್ಟವಿದ್ದರು ಒಪ್ಪುವುದಿಲ್ಲ, ಅಪ್ಪ ನೋಡಿದ ಹುಡುಗಿಯ ಜೊತೆ ಕರಣ್ನಿಗೆ ಮದುವೆ ನಿಶ್ಚಯವಾಗುತ್ತದೆ. ಈ ಮಧ್ಯೆ ಕಾವ್ಯ ಕರಣ್ನ ಬಳಿ ನಿನ್ನನ್ನು ಇಷ್ಟಪಡುತ್ತನೆ ಎಂದು ಹೇಳುತ್ತಾಳೆ.
ಮುಂದೆ ಕರಣ್ ತಂದೆ ತೋರಿಸಿದ ಹುಡುಗಿಯನ್ನು ಮದುವೆಯಾಗುತ್ತಾನ..? ಕಾವ್ಯಳನ್ನು ಮದುವೆಯಾಗುತ್ತಾನ..? ಶಿಸ್ತಿನ ಜೀವನ ಮಾಡು ತಂದೆ ಮಾತು ತಪ್ಪುತ್ತಾರ..? ಎನ್ನುವುದನ್ನು ತಿಳಿಯ ಬೇಕಾದರೆ ಸಿನಿಮಾ ನೋಡಬೇಕು.
ಕಥೆಯಲ್ಲಿ ಟ್ವಿಸ್ಟ್ ಇದ್ದು, ಮುಂದೆನಾಗುತ್ತದೆ ಎಂಬುದು ಗ್ರಹಿಸಲು ಆಗುವುದಿಲ್ಲ. ನಾಯಕ ಅಗಸ್ತ್ಯ ನಟನೆಯ ಕೊರತೆ ಎಲ್ಲೂ ಕಾಣುವುದಿಲ್ಲ, ನಾಯಕಿ ಸುವಾರ್ತ ಅಚ್ಚುಕಟ್ಟಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆನಂದ್ ನೀನಸಾಂ ತಮ್ಮ ಪಾತ್ರಕ್ಕೆ ಜೀವತುಂಬಿದರೆ. ಎರಡು- ಮೂರು ಸನ್ನಿವೇಶಗಳಲ್ಲಿ ಬಂದು ಹೋಗುವ ಚೇತನ್ ದುರ್ಗಾ ನಗುವನ್ನು ತರಿಸುತ್ತಾರೆ.
ಜೈ ಪಾಲ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಮಧುರವಾಗಿದ್ದು, ಪ್ರಸಾದ್ ನಾಯಕ್ ಕ್ಯಾಮರ ಕೈಚಳಕದಲ್ಲಿ ದೃಶ್ಯಗಳು ಅಧ್ಬುತವಾಗಿ ಮೂಡಿಬಂದಿವೆ.
ತಂದೆ- ಮಗನ ಬಾಂದ್ಯವದ ಜತೆ ಒಂದು ಪ್ರೇಮಕಥೆಯನ್ನು ನಿರ್ದೇಶಕ ಎಣಿದಿದ್ದಾರೆ. ಒಟ್ಟಾರೆ ಚಿತ್ರವನ್ನು ಫ್ಯಾಮಿಲಿ ಕೂತು ನೋಡಬಹುದು, ಯಾವುದೇ ಮುಜುಗರ ತರುವಂತ ಸಂಭಾಷಣೆ ಅಥವಾ ದೃಶ್ಯಗಳು ಪೂರ್ತಿ ಸಿನಿಮಾದಲ್ಲಿ ಇಲ್ಲ.