ಯಾರಿಗೂ ಹೇಳ್ಬೇಡಿ 24 ರಂದು ತೆರೆಗೆ
ಮೂರು ದಶಕಗಳ ಹಿಂದೆ ಆನಂತ್‌ನಾಗ್ ಅವರು ಅಭಿನಯಿಸಿದ ಯಾರಿಗೂ ಹೇಳ್ಬೇಡಿ ಚಿತ್ರವು ತೆರೆಕಂಡು ಹಿಟ್ ಆಗಿತ್ತು. ಇದೀಗ ಅದೇ ಹೆಸರಿನ ಚಿತ್ರವು ಇದೇ ವಾರ ತೆರೆಕಾಣುತ್ತಿದೆ. ಚಿತ್ರದ ಟ್ರೇಲರ್ ನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿ ಮೆಚ್ಚುಗೆಯ ಮಾತನಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಹಿಂದೆ “ಜಿಗರ್ ಥಂಡ” ಚಿತ್ರವನ್ನು ನಿರ್ದೇಶನ ಮಾಡಿದ ಶಿವಗಣೇಶ್ ಯಾರಿಗೂ ಹೇಳ್ಬೇಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಅಮ್ಮಿನೇನಿ ಹಾಗೂ ಸುನಿಲ್‌ಕುಮಾರ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಯಾರೇ ನೀ ಮೋಹಿನಿ ಧಾರಾವಾಯಿ ಖ್ಯಾತಿಯ ಚೇತನ್ ವಿಕ್ಕಿ ನಾಯಕನಾಗಿ ವಿಡಿಯೋ ಜಾಕಿ ಪಾತ್ರದಲ್ಲಿ ಹಾಗೂ ಚೈತ್ರಾ ಆಚಾರ್ ನಾಯಕಿಯಾಗಿ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ , ಅಶ್ವಿನಿ ಪೊಲೆಪಲ್ಲಿ ಉಪನಾಯಕಿ. ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾರಾವ್, ಶಭರೇಶ್, ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.
“ಚಿತ್ರದ ನಾಯಕ ಮದುವೆಯ ಹಿಂದಿನ ದಿನ ಒಂದು ಸುಳ್ಳು ಹೇಳಿ ಕಷ್ಟಕ್ಕೆ ಸಿಲುಕುತ್ತೇನೆ. ಅದನ್ನು ಯಾರಿಗೂ ಹೇಳ್ಬೇಡಿ ಎಂದು ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತಾನೆ. ಕೊನೆಗೆ ಅದನ್ನು ಮುಚ್ಚಿಡಲು ಹೋದಾಗ ಏನೆಲ್ಲಾ ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತೇನೆ ಎಂಬುದನ್ನು ಕಾಮಿಡಿ ಮೂಲಕ ಚಿತ್ರದಲ್ಲಿ ತೋರಿಸಲಾಗಿದೆಯಂತೆ“
ಶಶಾಂಕ್ ಶೇಷಗಿರಿ ಸಂಗೀತ, ಡೇವಿಡ್ ಆನಂದರಾಜ್ ಛಾಯಾಗ್ರಹಣ, ಸಂಕಲನ ದೀಪಕ್.ಸಿ.ಎಸ್ ಸಂಕಲನ ಚಿತ್ರಕ್ಕಿದೆ.