ರಾಂಗ್ ವರ್ಡ್ಸ್ ವಿಡಿಯೋ ಹಾಡು ಬಿಡುಗಡೆ

0
20260110_121351

ಯುವ ಪ್ರತಿಭೆ ನಹೇಶ್ ಪೂಲ್ ಆಟೋಮೊಬೈಲ್ ಇಂಜಿನಿಯರ್ ಆಗಿದ್ದು, ಪ್ರವೃತ್ತಿ ಫಿಲಂ ಮೇಕರ್. ಇದೀಗ ನಹೇಶ್ ಅವರು ಬರೆದು, ಸಂಗೀತ ನೀಡಿರುವ ರ‍್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ನಿರ್ಮಾಣದ “ರಾಂಗ್ ವಡ್ಸ್” ವಿಡಿಯೋ ಆಲ್ಬಂ ಬಿಡುಗಡೆ ಆಗಿದೆ.

ಸರ್ಕಾರವು ಹೊರತರುತ್ತಿರುವ ಹೊಸ ಮಸೂದೆಯ ವಿಷಯದ ಮೇಲೆ ಮಾಡಿರುವ ಈ ಆಲ್ಬಂನಲ್ಲಿ ನಹೇಶ್ ಪೂಲ್ ನಟಿಸಿದ್ದಾರೆ. ಈ ಹಾಡಿಗೆ ಕ್ರಿಯೇಟೀವ್ ಮುಖ್ಯಸ್ಥೆಯಾಗಿ ಅಕ್ಷರಸುರೇಶ್, ಛಾಯಾಗ್ರಹಣ-ಸಂಕಲನ ಸಾಗರ್ ಅವರದಾಗಿದೆ.

ಸಾಂಗ್ ರಿಲೀಸ್ ಬಳಿಕ ಮಾತನಾಡಿದ ನಹೇಶ್ ಪೂಲ್.. ಕಳೆದ ತಿಂಗಳು ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಅಥವಾ ಸಮುದಾಯದ ವಿರುದ್ದ ಯಾವುದೇ ವ್ಯಕ್ತಿ ಮಾತನಾಡಿದರೆ ಅಪರಾಧ ಎಂದು ಐವತ್ತು ಸಾವಿರ ದಂಡ, ಏಳು ವರ್ಷ ಜೈಲು ಶಿಕ್ಷೆ ಎಂಬುದರ ಬಗ್ಗೆ ಮಸೂದೆ ಹೊರಡಿಸಿದೆ.
ಆದರೆ ಇಲ್ಲಿಯವರೆಗೂ ರಾಜ್ಯಪಾಲರಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಇಂತಹ ಮಸೂದೆ ಸಾರ್ವಜನಿಕರಿಗೆ ಮಾಹಿತಿ ತಿಳಿದಿರುವುದಿಲ್ಲ. ಅದಕ್ಕಾಗಿ ಹಾಡಿನ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ.

ನಾನು ತಪ್ಪಾದ ಪದಗಳನ್ನು ಬಳಸಲು ಸಾಧ್ಯವಿಲ್ಲ. ಅವುಗಳನ್ನು ಬಳಸಿದರೆ ನನ್ನನ್ನು ಬಂದಿಸುತ್ತಾರೆ. ನನಗೆ ಬೇರೆ ಯಾವುದೇ ಪದಗಳಿಲ್ಲ. ಜತೆಗೆ ನಾವು ಜನರಿಗೆ ಮರಳಿ ಕೊಡುವಂತಹ ಒಂದು ಮಾದರಿ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ವಿಧಾನಸೌದ ಮೆಟ್ಟಲುಗಳ ಬಳಿಯಿಂದ ಪ್ರತಿಯೊಂದು ಹಂತವನ್ನು ನೇರ ಪ್ರಸಾರವಾಗಿ ತೋರಿಸಿ, ಪಾರದರ್ಶಕತೆಯೊಂದಿಗೆ ರಸ್ತೆಯನ್ನು ನಿರ್ಮಿಸುವುದು ನನ್ನ ಗುರಿಯಾಗಿದೆ.

ಇದನ್ನು ನಿರ್ಮಿಸಲು ನನಗೆ ಸಹಾಯ ಮಾಡಿ ಎನ್ನುವಂತಹ ಅಂಶಗಳು ಇರಲಿದೆ. ವಿಧಾನಸೌದ ಮುಂಬಾಗ ಒಂದು ದಿನ ಚಿತ್ರೀಕರಣ ನಡೆಸಲಾಗಿದೆ ಎಂದು ಗಿಟಾರ್ ನುಡಿಸಿ ಮಾಧ್ಯಮ ಮಿತ್ರರನ್ನು ರಂಜಿಸಿದರು.

Share

Leave a Reply

Your email address will not be published. Required fields are marked *