ವರ್ಣತರಂಗ 3 ಹಾಡುಗಳು ಬಿಡುಗಡೆ
ಶ್ರೀ ಪಾಷನಾಮೂರ್ತಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಬೆಳ್ತಂಗಡಿ ಉದ್ಯಮಿ ಬಿ.ಶಿವಕುಮಾರ್ ನಿರ್ಮಾಣದ “ವರ್ಣತರಂಗ” ಚಿತ್ರದ ಹಾಡು ಮೂರು ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕೊನೆಯ ಮುಖವೆಂದು ಇಂಗ್ಲೀಷ್ದಲ್ಲಿ ಅಡಿಬರಹ ಇರುವ ಈ ಚಿತ್ರವನ್ನು ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
“ವರ್ಣತರಂಗ ಅಂದರೆ ಬಣ್ಣಗಳ ಅಲೆಗಳು ಎಂಬರ್ಥ ಕೊಡುತ್ತದೆ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ? ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳು ಇರುವುದರಿಂದ ಇಷ್ಟನ್ನು ಮಾತ್ರ ಹೇಳಬಹುದು.ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಎಫ್ಎಕ್ಸ್ ಶೇಕಡ 25% ಬರುತ್ತದೆ“. ಎಂದು ನಿರ್ದೇಶಕರು ಹೇಳಿದ್ದರು.

ನಾನು ಈಗಾಗಲೇ ಎಸಿಪಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದರಲ್ಲೂ ಅದೇ ಪಾತ್ರವಿದ್ದರೂ ಕೇಸ್ ಬೇರೆಯದೆ ಆಗಿರುತ್ತದೆ. ಅದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲವೆಂದು ತಿಲಕ್ ಮಾಧ್ಯಮದ ಪ್ರಶ್ನೆಗೆ ಉತ್ತರವಾದರು.
ಬಾರ್ ನಲ್ಲಿ ಬರುವ ಸುಕ್ಕ ಸುಕ್ಕ ಗೀತೆಗೆ ಚಂದನ್ಶೆಟ್ಟಿ ಧ್ವನಿಯಾಗಿದ್ದಾರೆ.
ಸೆಲ್ವರಾಜ್ ಸಹ ನಿರ್ಮಾಪಕರಾಗಿದ್ದಾರೆ. ಎಸಿಪಿ ಪಾತ್ರದಲ್ಲಿ ತಿಲಕ್ ನಾಯಕ. ಜೀವಿತಾ ನಾಯಕಿ ಪತ್ರಕತೆಯಾಗಿ ಸಾಕ್ಷಿ ಮೇಘನಾ ಉಪನಾಯಕಿ. ಹ್ಯಾಕರ್ ಅಗಿ ವರ್ಧನ್. ಉಳಿದಂತೆ ಹೇಮಂತ್, ರಮೇಶ್ ಪಂಡಿತ್, ಬಲರಾಜವಾಡಿ, ಟೆನ್ನಿಸ್ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್ಭಟ್ ಮುಂತಾದವರು ನಟಿಸಿದ್ದಾರೆ.
ಸಂಗೀತ ಆಕಾಶ್ರೆಡ್ಡಿ-ಯಶವಂತ್ಭೂಪತಿ, ಛಾಯಾಗ್ರಹಣ ಮನುಗೌಡ, ಸಂಕಲನ ವೆಂಕಿ.ಯುಡಿವಿ, ಸಾಹಿತ್ಯ ವಿ.ಎನ್.ಸ್ವಾಮಿ-ಆಕಾಶ್ರೆಡ್ಡಿ-ಮಿಥುನ್ಸುವರ್ಣ, ಕಾರ್ಯಕಾರಿ ನಿರ್ಮಾಪಕ ಕೆ.ಬಾಲಸುಬ್ರಮಣ್ಯನ್, ಹಾಗೂ ಥ್ರಿಲ್ಲರ್ಮಂಜು-ಕುಂಗುಫೂ ಚಂದ್ರು-ನರಸಿಂಹ ಸಾಹಸ ಚಿತ್ರಕ್ಕಿದೆ.

youtube link 👇🏼