ರೂರಲ್ ಕಾಲೇಜಿನಲ್ಲಿ ಥ್ರೋ ಬಾಲ್ ಟೂರ್ನಮೆಂಟ್

0
WhatsApp Image 2025-06-12 at 11.04.51 AM

ಕನಕಪುರದ ರೂರಲ್ ಕಾಲೇಜಿನಲ್ಲಿ ಶ್ರೀ ಎಸ್ ಕರಿಯಪ್ಪನವರ 125ನೇ ಜನ್ಮದಿನೋತ್ಸವ ಪ್ರಯುಕ್ತ “ರಾಜ್ಯ ಮಟ್ಟದ ಪುರುಷರ ಥ್ರೋ ಬಾಲ್ ಟೂರ್ನಮೆಂಟ್” ನ್ನು ಆರ್ ಇ ಎಸ್ ಥ್ರೋ ಬಾಲ್ ಕ್ಲಬ್‌ನ ತರಬೇತುದಾರ ನವೀನ್ ಕುಮಾರ್ ಮತ್ತು ಸಂಸ್ಥೆಯ ಇಂಜಿನಿಯರ್ ಜಯಂತ್‌ಕುಮಾರ್ ಬಿ ವಿ ಹಾಗೂ ಸಂಸ್ಥೆಯ ಎಲ್ಲಾ ಹಿರಿಯ-ಕಿರಿಯ ಕ್ರೀಡಾಪಟುಗಳು ಆಯೋಜಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ ರಘು ಅವರು ಕಾರ್ಯಕ್ರಮ ಉದ್ಘಾಟಿಸಿದರೆ, ಮುಖ್ಯ ಅತಿಥಿಯಾಗಿ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಆಗಮಿಸಿದರು. ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಇ ಎಸ್ ಸಂಸ್ಥೆಯ ಅಧ್ಯಕ್ಷರಾದ ಎಚ್ ಕೆ ಶ್ರೀಂಠ ರವರು ವಹಿಸಿದ್ದರು.

ಹಾಸನ ರಘು ಅವರು ಮಾತನಾಡಿ ನನ್ನನ್ನು ಈ ಕಾರ್ಯಕ್ರಮಕ್ಕೆ ಅಹ್ವಾನಿಸಿದಕ್ಕೆ ತುಂಬಾ ಧನ್ಯವಾದಗಳು ಎಂದರು. ನಾನು ಕೂಡ “ಮಲ್ಲಕಂಬ”ವನ್ನು ಮಕ್ಕಳಿಗೆ ತರಬೇತಿ ಕೊಡುತ್ತಿದ್ದೇನೆ. ಚನ್ನಪಟ್ಟಣದಲ್ಲಿ ಒಂದು ಕೇಂದ್ರವನ್ನು ಸ್ಥಾಪನೆ ಮಾಡಿದ್ದೇವೆ ಎನ್ನುತ್ತ. ಥ್ರೋ ಬಾಲ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಆಲ್ ದಿ ಬೆಸ್ಟ್ ಹೇಳಿದರು.

ವಾಸುಕಿ ವೈಭವ್ ಮಾತನಾಡಿ.. ಕನಕಪುರ ನನ್ನ ಎರಡನೇ ಊರು ಅಂತ ಹೇಳಬಹುದು, ನನ್ನ ಸ್ನೇಹಿತ ಇದೇ ಊರಿನಲ್ಲಿ ಇರೋದು ಆಗಾಗಿ ನನ್ನ ಊರು ಬಿಟ್ಟರೆ ಕನಕಪುರಕ್ಕೆ ಹೆಚ್ಚಾಗಿ ಬಂದಿದ್ದೀನಿ ಎಂದು ಮಾತು ಆರಂಭಿಸಿ ಇಡೀ ದೇಶದಲ್ಲಿ ಕ್ರಿಕೆಟ್ ಅಬ್ಬರದ ನಡುವೆ ಥ್ರೋ ಬಾಲ್ ಟೂರ್ನಮೆಂಟ್ ಮಾಡುತ್ತಿರುವುದಕ್ಕೆ ನಿಮಗೆಲ್ಲಾ ದೊಡ್ಡ ಹ್ಯಾಡ್‌ಸಪ್ ನಿಮಗೆ ಎಂದರು. ಕ್ರೀಡೆಯಿಂದ ನಮ್ಮ ದೈಹಿಕ ಆರೋಗ್ಯ ಚೆನ್ನಾಗಿರುತ್ತೆ, ಮಾನಸಿಕವಾಗಿ ಫಿಟ್ ಆಗಿರಬಹುದು. ನಾನು ಪ್ರತಿ ದಿನ ತಪ್ಪಾಂದೇ ಬ್ಯಾಟ್‌ಮಿಟನ್ ಆಡುತ್ತೆನೆ ಎಂದು ಹೇಳುತ್ತ ಒಂದು ಭಾವಗೀತೆಯನ್ನು ಹೇಳಿ ಕ್ರೀಡಾ ಪಟುಗಳಿಗೆ ಹಾಗೂ ಬಂದಿದ್ದ ಜನರನ್ನು ರಂಜಿಸಿದರು.

ಆರ್ ಇ ಎಸ್ ಅಧ್ಯಕ್ಷರಾದ ಶ್ರೀಕಂಠ ಅವರು ಮಾಡನಾಡಿ ” ಆರ್ ಇ ಎಸ್‌ನಲ್ಲಿ 21 ಎಕೆರ ಇದೆ. ಇದು ಆರ್ಟ್ ಆಫ್ ಟೌನ್ 21 ಎಕರೆ ಕರಿಯಪ್ಪ ನವರು ಮಾಡಿಕೊಟ್ಟಿದ್ದಾರೆ. ಇಲ್ಲಿ ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಹ ಮಾಡ್ತಾ ಇದ್ದೀವಿ, ಇತರ ಆಟಕ್ಕಿಂತ ಥ್ರೋ ಬಾಲ್ ಆಟವನ್ನು ಬಹುಶ: ಹೆಚ್ಚಾಗಿ ಪ್ರೋತ್ಸಾಹ ಮಾಡಿರೋದೇ ನಮ್ಮ ಕಾಲೇಜು ಎನ್ನುತ್ತ ನಾವು ಯಾವುದೇ ಕಾರಣಕ್ಕೂ ಆಕಾಡಮಿಕ್ ಜೊತೆ ಸ್ಪೋಟ್ಸ್ ಸಂಬಂಧಿತ ಆಕ್ಟಿವಿಟ್ಸ್ ಗೆ ನಾನು ಸೇರಿದಂತೆ ನಮ್ಮ ಮ್ಯಾನೇಜ್‌ಮೆಂಟ್ ಬೆಂಬಲ ಇರುತ್ತೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 16 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ವೈ.ಎಸ್.ಸಿ ಬೆಂಗಳೂರು, ಎರಡನೇ ಸ್ಥಾನವನ್ನು ಭಗತ್ ಸಿಂಗ್ ಹಾಗೂ ಮೂರನೇ ಸ್ಥಾನವನ್ನು ರೂಲರ‍್ಸ್ ಬೆಂಗಳೂರು ತಂಡಗಳು ಅಲಂಕರಿಸಿದವು.

Share

Leave a Reply

Your email address will not be published. Required fields are marked *