ಮುಂದಿನ ತಿಂಗಳು ಏಪ್ರಿಲ್ 3 ರಂದು ಪ್ರೇಮಿ ನಿಮ್ಮ ಮುಂದೆ

0
20260312_132243.jpg

ಪ್ರದೀಪ್‌ವರ್ಮ ನಿರ್ದೇಶನದ 2 ನೇ ಚಿತ್ರ

ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಪ್ರೇಮಿ” ಚಿತ್ರವು ಏಪ್ರಿಲ್ 3ರಂದು ಬಿಡುಗಡೆಗೆ ಸಜ್ಜಾಗಿದೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಪ್ರದೀಪ್‌ವರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇವರ ನಿರ್ದೇಶನದ 2ನೇ ಚಿತ್ರ ಇದ್ದಾಗಿದೆ.
ಜ್ಯೋತಿಷ್ಯದ ಮೂಲಕ ಪ್ರೀತಿಯನ್ನು ಹುಡುಕುವ ವಿಭಿನ್ನ ಕಥಾಹಂದರ ಇರುವಈ ಚಿತ್ರದ ಈ ಚಿತ್ರದ ನಾಯಕನಾಗಿ ಅದ್ವಿಕ್, ನಾಯಕಿಯಾಗಿ ಸಾತ್ವಿಕ ಇವರ ಜತೆ ಪ್ರಮುಖ ಪಾತ್ರದಲ್ಲಿ ಪ್ರದೀಪ್‌ವರ್ಮ ಹಾಗೂ ಶೋಭಿತ ನಟಿಸಿದ್ದಾರೆ.

ಇನ್ನು ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, ಇದೇ ಮಾರ್ಚ್ 17ರಂದು ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿದೆ. “ಪ್ರೇಮಿ” ಗೆ ಟಿ.ಎಸ್ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಪ್ರದೀಪ್ ವರ್ಮ ಅವರೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ಚಿತ್ರದ ಇತರೆ ಪಾತ್ರಗಳಲ್ಲಿ ಹರೀಶ್ ಉಕ್ಕಡಗಾತ್ರಿ, ಶಂಕರ್ ಅಂಬಿ, ಹೆಚ್ ಜಿ ವೀರೇಶ್, ದ್ವಿತ ಕೆ ಗೌಡ, ಸಂದೇಶ್, ಸಂಗಮೇಶ್ ದೇವರಬೆಳಕೆರೆ, ಕಲ್ಕಿ, ಮಾಸ್ಟರ್ ಹರೀಶ್, ಮಾಸ್ಟರ್ ಸಂತೃಪ್ತಿ ಶಿವಧರಮಠ, ಸಮರ್ಥ್ ರಾಘವೇಂದ್ರ, ಸುರೇಶ್ ಬಾಬು ಅಭಿನಯಿಸಿದ್ದಾರೆ.

ದಾವಣಗೆರೆ, ದೇವರಬೆಳಕೆರೆ, ಗೋಕರ್ಣ, ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಎನ್ ವಿಮಲ್ ರಾಜ್ ಅವರ ಸಂಭಾಷಣೆ, ಗೌತಮ್ ಮಟ್ಟಿ ಛಾಯಾಗ್ರಹಣ ಮತು ಸಂಜೀವ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *