ಬಲರಾಮನ ದಿನಗಳು ಚಿತ್ರದ ಮೊದಲ ಹಾಡು ರಿಲೀಸ್
balaramana dinagalu movie song out
ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಕೆ ಎಂ ಚೈತನ್ಯ ನಿರ್ದೇಶನದ “ಬಲರಾಮನ ದಿನಗಳು” ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚಿತ್ರತಂಡವು ಆಗಮಿಸಿತ್ತು. ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ಇದು ಅವರ 25ನೇ ಚಿತ್ರವಾಗಿದೆ. ಪ್ರಿಯಾ ಆನಂದ್, ವಿನೋದ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
“ಶುರು ಶುರು” ಎಂಬ ಹಾಡು ಬಿಡುಗಡೆ ಆಗಿದ್ದು, ಹಾಡನ್ನು ಜಯಂತ್ ಕಾಯ್ಕಿಣಿ ಅವರು ಬರೆದಿದ್ದು, ತಮಿಳಿನ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನದಲ್ಲಿ ಸಂಚಿತ್ ಹೆಗ್ಡೆ ಹಾಗು ಪುಣ್ಯ ಹಾಡಿದ್ದಾರೆ.

1980 ನೇ ಕಾಲಘಟ್ಟದಲ್ಲಿ ನಡೆದ ಬೆಂಗಳೂರಿನ ಅಂಡರ್‌ವಲ್ಡ್ ಕಥೆಯನ್ನು ಚಿತ್ರದಲ್ಲಿ ಕಾಣಬಹುದು. ನಿರ್ದೇಶಕ ಕೆ ಎಂ ಚೈತನ್ಯ ಮಾತನಾಡಿ.. “ಬಲರಾಮನ ದಿನಗಳು ಕಾಲ್ಪನಿಕ ಕಥೆಯಾಗಿದ್ದು, ಆ ದಿನಗಳು ಚಿತ್ರದ ಪಾರ್ಟ್ 2 ಕಥೆ ಅಲ್ಲ ಹಾಗೂ ನಿರ್ಮಾಪಕರು ಆಸೆಯಿಂದ ಸಿನಿಮಾ ಮಾಡಿದ್ದಾರೆ.ಸಿನಿಮಾ ಗೆದ್ದರೆ ಹತ್ತು ಹಲವಾರು ಸಿನಿಮಾ ಮಾಡ್ತಾರೆ.ಬೆಂಬಲ ಮುಖ್ಯ“ಎಂದು ಹೇಳಿದರು.
“ನನ್ನ 25ನೇ ಚಿತ್ರಗಳಲ್ಲಿ ಈ ಚಿತ್ರಕ್ಕೆ ಆಡಿಯೋ ರೈಟ್ಸ್ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದೆ. ನನ್ನ 25 ಚಿತ್ರಗಳಲ್ಲಿ ಆಡಿಯೋ ರೈಟ್ಸ್ ಅಧಿಕ ಮೊತ್ತಕ್ಕೆ ಸೇಲ್ ಆಗಿರುವ ಮೊದಲ ಚಿತ್ರ ಎನ್ನುತ್ತ, ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ“ ಎಂದರು ವಿನೋದ್ ಪ್ರಭಾಕರ್.
“ಕನ್ನಡದಲ್ಲಿ ಇದು ನನ್ನ 5 ನೇ ಚಿತ್ರ ಕನ್ನಡ ಕಲಿಯಲು ಪುನೀತ್ ರಾಜ್‌ಕುಮಾರ್ ಕಾರಣ, ಭಾಷೆ ಗೊತ್ತದ್ದರೆ ಚಿತ್ರದಲ್ಲಿ ಸನ್ನಿವೇಶಗಳನ್ನು ಸುಲಭವಾಗಿ ನಟಿಸಲು ಸಾಧ್ಯವಾಘುತ್ತದೆ ಎಂದಿದ್ದರು, ಪುನೀತ್ ರಾಜ್‌ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಲರಾಮನ ದಿನಗಳು ಚಿತ್ರ ಚೆನ್ನಾಗಿ ಬಂದಿದೆ.“ ಎಂದರು ನಟಿ ಆನಂದ್ ಪ್ರಿಯಾ
“ಸಿನಿಮಾ ಮಾಡಿರುವುದು ಖುಷಿ ಇದೆ. ಫ್ಯಾಮಿಲಿ ಕೂತು ನೋಡಬಹುದಾದ ಚಿತ್ರ ಮಾಡಿದದೇವೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಟಿ ಸಿರೀಸ್ ಚಿತ್ರದ ಹಾಡಿನ ಹಕ್ಕು ಖರೀದಿ ಮಾಡಿದ್ದು ಮತ್ತೊಂದು ಸಿನಿಮಾ ಮಾಡುವಷ್ಡು ಹಣ ನೀಡಿದ್ದಾರೆ. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಾಗುವುದು“ ಎಂದು ನಿರ್ಮಾಪಕರಾದ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಹೇಳಿದರು.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅವಿನಾಶ್ , ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ನಟಿಸಿದ್ದಾರೆ.