ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬಾಲಕಿಯರ ತಂಡ ಪ್ರಥಮ & ಬಾಲಕರ ತಂಡ ದ್ವಿತೀಯ ಸ್ಥಾನ

0
WhatsApp Image 2025-05-23 at 9.37.09 AM

Sports For Change 7ನೇ ಆವೃತ್ತಿಯ ಕಾರ್ಯಕ್ರಮದ ಅಡಿ HCL foundation ನವರು ಮೂಡುಬಿದ್ರೆಯ ಆಳ್ವಾಸ್ ನಲ್ಲಿ ಏರ್ಪಡಿಸಿದ್ದ “ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಅಚ್ಚಲು ಶಾಲಾ ಬಾಲಕಿಯರ ತಂಡ ಪ್ರಥಮ & ಬಾಲಕರು ತಂಡ ದ್ವಿತೀಯ ಸ್ಥಾನ” ಪಡೆದು ದಕ್ಷಿಣ ವಲಯ (South Zone) ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದಕ್ಷಿಣ ವಲಯ ಮಟ್ಟವು ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದ್ದು ದಕ್ಷಿಣ ಭಾರತದ 5 ರಾಜ್ಯಗಳು ಭಾಗವಹಿಸಲಿವೆ.

ವಿಜೇತ ತಂಡಕ್ಕೆ ಮುಖ್ಯ ಶಿಕ್ಷಕಿ ರೇಣುಕಾಂಬ & ಶಿಕ್ಷಕವೃಂದ, ಅಚ್ಚಲು ಪಂಚಾಯ್ತಿ ಅಧ್ಯಕ್ಷರು & ಸದಸ್ಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು & ಸದಸ್ಯರು, ಆರ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಹೆಚ್.ಕೆ ಶ್ರೀಕಂಠು, ಆದಿತ್ಯಾ ಕಾಲೇಜಿನ ಪ್ರಾಂಶುಪಾಲ ಸತೀಶ್, ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Share

Leave a Reply

Your email address will not be published. Required fields are marked *