ತ್ರಿಕಾರಂ ಚಿತ್ರದ ಹಾಡು ಬಿಡುಗಡೆ

0
20260214_121227.jpg

ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ “ತ್ರಿಕಾರಂ” ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ರಾಜಕೀಯ ಧುರೀಣ ರವೀಂದ್ರ ಮತ್ತು ನಟ ಶಿವರಾಜ್.ಕೆ.ಆರ್.ಪೇಟೆ ಹಾಗೂ ನಿರ್ದೇಶಕ ಖದರ್ ಕುಮಾರ್ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈಗಾಗಲೇ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿ ವೈರಲ್ ಆಗಿದ್ದು, ಪ್ರೇಮಿಗಳ ದಿನಾಚರಣೆ ಅಂಗವಾಗಿ ಪ್ರೇಮಿಗಳಿಗೊಸ್ಕರ ಸೀದಾ ನಿಂತರೂ ಲೋಕ ಯಾಕೆ ಉಲ್ಟ ಕಾಣ್ತದೆ… ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಈ ಹಾಡನ್ನು ಕೇಶು-ಚೇತನ್ ಬರೆದಿದ್ದು, ರಾಜೇಶ್ ಕೃಷ್ಣನ್ ಧ್ವನಿಗೆ, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ.

ಇದು ಸ್ಮಶಾನ ಅಲ್ಲ ಎಂಬ ಅಡಿಬರಹ ಇರುವ ಈ ಚಿತ್ರವನ್ನು ನಾಟಕ ಪ್ರೇಮಿ ಜಿ.ಗಣೇಶ್ ಮೂರ್ತಿ ನಿರ್ಮಾಣ ಮಾಡುವುದರ ಜತೆಗೆ ಖತರ್‌ನಾಕ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಅಜ್ಜಂಪುರದ ದಿಲೀಪ್ ಕುಮಾರ್.ಜೆ. ಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ದೈವ ಮತ್ತು ದುಷ್ಟ ನಡುವಿನ ಹೋರಾಟ ಕಥೆಯು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಅದು ಯಾವ ರೀತಿಯ ಹೋರಾಟ, ಯಾತಕ್ಕಾಗಿ? ಶಿವನನ್ನು ತ್ರಿಕಾರಂ ಅಂತಲೂ ಕರೆಯುತ್ತಾರೆ. ಇನ್ನು ಹೆಚ್ಚಿಗೆ ಹೇಳಿದರೆ ಸಿನಿಮಾದ ಸಾರಾಂಶವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಆದಕಾರಣ ದಯಮಾಡಿ ಎಲ್ಲರೂ ಚಿತ್ರಮಂದಿರಕ್ಕೆ ಬರಬೇಕು ಎಂದರು.

ಮುಗ್ದ ಹಾಗೂ ರುದ್ರನಾಗಿ ಎರಡು ಶೇಡ್‌ಗಳಲ್ಲಿ ಹರ್ಷವರ್ಧನ್ ಮೊದಲ ಬಾರಿಗೆ ನಾಯಕ ಅಭಿನಯಿಸಿದ್ದು. ಅದೇ ರೀತಿ ಜಂಬದಹುಡುಗಿ, ಮೃದು ಸ್ವಭಾವದವಳಾಗಿ ನಿಶ್ಚಿತಶೆಟ್ಟಿ ನಾಯಕಿ. ಉಳಿದಂತೆ ನಾಗೇಂದ್ರಅರಸು, ಬಲರಾಜವಾಡಿ, ಮಂಜುಪಾವಗಡ ಮುಂತಾದವರು ನಟಿಸಿದ್ದಾರೆ.

Harshavardhan and Nischitha Shetty

ನಿರ್ದೇಶಕರ ಊರದ ಹೊಸದುರ್ಗ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಸಲಾಗಿದ್ದು. ಅಂದುಕೊಂಡಂತೆ ಇದೇ ವರ್ಷ ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಚಿತ್ರಕ್ಕೆ ಹೊನ್ನಾಳಿ ಯಾಸಿನ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ.

Share

Leave a Reply

Your email address will not be published. Required fields are marked *