ರಿಯಲ್‌ ಸ್ಟಾರ್‌ ಮೆಚ್ಚಿದ ‘I am God’ ಟ್ರೇಲರ್‌

0
20251029_120815

“ಐ ಅಮ್ ಗಾಡ್”(I Am God) ಎಂಬ ಪದ ಕೇಳಿದರೆ ನೆನೆಪಾಗುವುದು ರಿಯಲ್ ಸ್ಟಾರ್ ಉಪೇಂದ್ರ, ಈಗ ಅದೇ ಶೀರ್ಷಿಕೆಯನ್ನು ಇಟ್ಟುಕೊಂಡು ಉಪೇಂದ್ರ ಅವರ ಗರಡಿಯಲ್ಲಿ ಪಳಗಿದ ರವಿಗೌಡ ಅವರು ಸಿನಿಮಾ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಉಪ್ಪಿ-2 (uppi 2)ಚಿತ್ರದಲ್ಲಿ ಕೆಲಸ ಮಾಡಿರುವ ರವಿಗೌಡ (Ravi Gowda) ಅವರು ನಿರ್ದೇಶನದ ಜತೆ ನಾಯನಾಗಿ ನಟಿಸಿರುವ ಐ ಅಮ್ ಗಾಡ್ ತೆರೆಕಾಣಲು ಸಿದ್ದವಾಗಿದೆ.

ಚಿತ್ರದ ಎರಡು ಹಾಡುಗಳು ಬಿಡುಗಡೆ ಆಗಿದ್ದು, ಹಾಡುಗಳು ಸಿನಿರಸಿಕರ ಗಮನ ಸೆಳೆದಿದೆ.ಇನ್ನು ಸಿನಿಮಾದಲ್ಲಿ ರವಿಗೌಡಗೆ ನಾಯಕಿಯಾಗಿ ವಿಜೇತಾ (Vijeta) ಅಭಿನಯಿಸಿದ್ದಾರೆ.

ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು, ಶಿಷ್ಯನ ಟ್ರೇಲರ್ ಬಿಡುಗಡೆ ಮಾಡಲು ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿದರು.
ಟ್ರೇಲರ್ ನೋಡಿ ಮೆಚ್ಚಿದ ಉಪ್ಪಿ ರವಿಗೌಡ ಅವರ ಬಗ್ಗೆ ಮಾತನಾಡುತ್ತ ಉಪ್ಪಿ-2 ಸಿನಿಮಾ ಸಂದರ್ಭದಲ್ಲಿ ತುಂಬಾ ಆಸಕ್ತಿಯಿಂದ ಸಿನಿಮಾ ಬಗ್ಗೆ ಕಲಿತುಕೊಳ್ಳುತ್ತಿದ್ದರು ಎನ್ನುತ್ತ ಆ ದಿನಗಳನ್ನು ನೆನಪಿಸಿಕೊಂಡರು.

ಇನ್ನೂ ಚಿತ್ರ ನಿರ್ದೇಶನ, ನಿರ್ಮಾಣದ ಜತೆ ನಾಯಕನಾಗಿ ನಟಿಸಿರುವ ರವಿಗೌಡ ಅವರು ಮಾತನಾಡಿಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಾಗ, ಯಾವುದೇ ಸಿನಿಮಾ ಯುನಿವರ್ಸಿಟಿ ಬೇಡ ಎಂದು ಉಪ್ಪಿ ಸರ್ ಹತ್ತಿರ ಹೋಗೋದು ಬೆಸ್ಟ್ ಅಂತ ನಿರ್ಧರಿಸಿ ಹೋಗಿ ರಿಕ್ವೆಸ್ಟ್ ಮಾಡಿ ಸೇರಿಕೊಂಡೆ ಎಂದರು.. ಹಾಗೂ ಐ ಅಮ್ ಗಾಡ್ ಚಿತ್ರವನ್ನು ಕಷ್ಟ ಪಟ್ಟು ಮಾಡಿದ್ದೇವೆ,

ಚಿತ್ರ ನೋಡಿ ಎಂದು ನಾವು ಹೇಳಲ್ಲ.. ಆದರೆ ನಿಮ್ಮ ಸ್ನೇಹಿತರ ಗುಂಪಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಅಂತು ಇದ್ದೇ ಇರ್ತಾರೆ ಅವರಿಗೆ ಕಾಲ್ ಮಾಡಿ ಕೇಳಿ ಐ ಅಮ್ ಗಾಡ್ ಸಿನಿಮಾ ಹೇಗಿದೆ ಅಂತ ಅಷ್ಟೇ ಸಾಕು ನಮಗೆ ಎಂದರು.

ಐ ಅಮ್ ಗಾಡ್ ಟ್ರೇಲರ್ ನೋಡಿದ್ರೆ ಇದೊಂದು ಲವ್ ಸ್ಟೋರಿ ಜತೆ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಇರುವ ಸಿನಿಮಾ ಎಂದು ಗೊತ್ತಾಗುತ್ತೆ ಹಾಗೂ ಮೇಕಿಂಗ್ ಅದ್ಭುತವಾಗಿದೆ… ಉಪೇಂದ್ರ ಅವರ ಶಿಷ್ಯ ಆಗಿರೋದ್ರಿಂದ ಉಪ್ಪಿ ಸ್ಟೈಲ್‌ ಆಫ್‌ ಮೇಕಿಂಗ್‌ ಐ ಅಮ್ ಗಾಡ್ ಸಿನಿಮಾದಲ್ಲೂ ನೋಡಬಹುದು.
ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ಅವಿನಾಶ್, ಅರುಣ ಬಾಲರಾಜ್ ಹಾಗೂ ನಿರಂಜನ್ ಕುಮಾರ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ , ಜಿತಿನ್ ದಾಸ್ ಕ್ಯಾಮೆರಾವರ್ಕ್ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *