ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಚಿತ್ರ ‘ದಿ ಟಾಸ್ಕ್’ ಟೀಸರ್ ಬಿಡುಗಡೆ
ನಿರ್ದೇಶಕ ರಾಘು ಶಿವಮೊಗ್ಗ ಅವರು ಚೂರಿಕಟ್ಟೆ, ಪೆಂಟಗನ್ ಚಿತ್ರಗಳ ನಂತರ ಆಕ್ಷನ್, ಥ್ರಿಲ್ಲರ್ ಇರುವ “ದಿ ಟಾಸ್ಕ್” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರವು ನವೆಂಬರ್ 21ಕ್ಕೆ ತೆರೆಕಾಣಲು ಸಿದ್ದವಾಗಿದೆ, ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
A D G P ಎಂ ಚಂದ್ರಶೇಖರ್ ಅವರು ಟೀಸರ್ ಬಿಡುಗಡೆ ಮಾಡಿದರು ಹಾಗೂ ಲಹರಿ ಸಂಸ್ಥೆಯ ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್ , ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಕೋರಿದರು
ಲೋಕಪೂಜ್ಯ ಪಿಕ್ಚರ್ ಹೌಸ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ವಿಜಯ್‌ಕುಮಾರ್ ಹಾಗೂ ರಾಮಣ್ಣ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಪೆಂಟಗನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಸಿನಿರಸಿಕರಿಗೆ ಪರಚಿತರಾದ ಜಯಸೂರ್ಯ ನಾಯಕರಾಗಿ ನಟಿಸಿದ್ದಾರೆ.
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಎಡಿಜಿಪಿ ಎಂ ಚಂದ್ರಶೇಖರ್ ಅವರು “ಸಿನಿಮಾಗಳಲ್ಲಿ ಮೆಸೇಜ್ ಇರಬೇಕು ಏಕೆಂದರೆ ಸಿನಿಮಾದ ಪ್ರಭಾವ ಸಮಾಜದಲ್ಲಿ ಪ್ರಭಾವ ಬೀರುತ್ತದೆ. ನಾನು ಚಿತ್ರದ ಕಥೆ ಕೇಳಿದ್ದೀನಿ ಆದರೆ ಇಲ್ಲಿ ಹೇಳು ಆಗಿಲ್ಲ, ಆದರೆ ಎಂಟರ್ಟೈನ್ಮೆಂಟ್ ಜತೆಗೆ ಒಂದು ಉತ್ತಮ ಸಂದೇಶ ಟಾಸ್ಕ್ ಚಿತ್ರದಲ್ಲಿದೆ ಹಾಗೂ ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟ ಇರುತ್ತದೆ. ಇಬ್ಬರು ನಾಯಕರುಗಳಿಗೆ ಶುಭವಾಗಲಿ“ ಎಂದರು.

ಭರ್ಜರಿ ಚೇತನ್ ಮಾತನಾಡಿ “ರಾಘು ಶಿವಮೊಗ್ಗ ನಟನೆ ಎಷ್ಟು ನೈಜವಾಗಿ ಇರುತ್ತದೆಯು ಅಷ್ಟೆ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ನೈಜವಾಗಿರುತ್ತದೆ. ಅವರ ಸಿನಿಮಾ ಕೊನೆ ಸೀನ್ ತನಕ ಹಿಡಿದು ಇಟ್ಟುಕೊಳ್ಳುತ್ತಾರೆ. ಚಿತ್ರದ ಇಬ್ಬರು ನಾಯಕರುಗಳನ್ನು ನೋಡಿದ್ರೆ ಎರಡು ಹುಲಿಗಳನ್ನು ನೋಡಿದ ರೀತಿ ಆಗುತ್ತದೆ“ ಎಂದರು.
ಪವನ್ ಒಡೆಯರ್ ಮಾತನಾಡಿ “ಇಬ್ಬರು ನಾಯಕರು ಸ್ಕ್ರೀನ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಚಿತ್ರದ ಮೇಕಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುತ್ತ, ಚಿತ್ರದಲ್ಲಿ ನಟಿಸುತ್ತೇನೆ ಎಂದರೆ ತಂದೆ-ತಾಯಿ ಬೇಡ ಎನ್ನುತ್ತಾರೆ. ಆದರೆ ಈ ವಿಷಯದಲ್ಲಿ ರಾಜೇಶ್ ಮಗ ಅದೃಷ್ಟ ಮಾಡಿದ್ದಾರೆ. ಮಗನ ಕನಸಿಗೆ ಸಾಥ್ ಕೊಟ್ಟಿದ್ದಾರೆ, ಚಿತ್ರ ಸೂಪರ್ ಹಿಟ್ ಆಗಲಿ ” ಎಂದರು.
ಸಿಂಪಲ್ ಸುನಿ ಮಾತನಾಡಿ “ ಜಯಸೂರ್ಯ ಮಿಸ್ಟರ್ ಸ್ಯಾಂಡಲ್‌ವುಡ್, ಸಾಗರ್ ಪೆಂಟಗನ್ ನಂತರ ದಿ ಟಾಸ್ಕ್ ನಲ್ಲಿ ನಟಿಸಿದ್ದಾರೆ. ರಾಘು ಸರ್ ಅವರು ಶಾರ್ಟ್ ಮೂವಿ ಮಾಡಿ ಸ್ಟೇಟ್ ಅವಾರ್ಡ್ ಪಡೆದುಕೊಂಡವರು. ಅವರ ಚೂರಿಕಟ್ಟೆ ಮೂವಿ ಒಳ್ಳೆ ಕಲ್ಟ್ ಸಿನಿಮಾ, ಈಗ ಟಾಸ್ಕ್ ಚಿತ್ರಕ್ಕಾಗಿ ಕಾಯುತ್ತಿದ್ದೇನೆ“ ಎಂದರು.
ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ “ಈ ಚಿತ್ರದ ಕಥೆಯನ್ನು ಹಲವು ನೈಜ ಘಟನೆ ಇಟ್ಕೊಂಡು ಕಥೆ ಮಾಡಲಾಗಿದೆ. ಪ್ರತಿಯೊಬ್ಬ ಟೆಕ್ನಿಷಿಯನ್ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ“ ಎಂದರು.
ಇನ್ನೂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಹರಿಣಿ ಶ್ರೀಕಾಂತ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಾಲಾಜಿ ಮನೋಹರ್, ಸಂಪತ್ ಮೈತ್ರಿಯಾ, ಅಶ್ವಿನ್ ಹಾಸನ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.