ದಸರಾ ಸಿ ಎಂ ಕಪ್ ಕ್ರೀಡಾಕೂಟಕ್ಕೆ ಆರ್. ಇ. ಎಸ್ ಆಯ್ಕೆ

0
20250917_080713

ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ದಸರಾ ಸಿ ಎಂ ಕಪ್ ಥ್ರೋ ಬಾಲ್ ಕ್ರೀಡಾಕೂಟಕ್ಕೆ (R E S) ಥ್ರೋ ಬಾಲ್ ಪುರುಷರ ತಂಡ ಆಯ್ಕೆ ಆಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಟೂರ್ನಮೆಂಟ್ ಆಯೋಜಿಸಲಾಗಿತ್ತು.

ಈ ಟೂರ್ನಮೆಂಟ್‌ನಲ್ಲಿ ರಾಮನಗರ ಜಿಲ್ಲೆಯ ಪರವಾಗಿ ಆರ್. ಇ. ಎಸ್ ಥ್ರೋ ಬಾಲ್(throw ball) ಪುರುಷರ ತಂಡ ತಂಡ ಭಾಗವಹಿಸಿ ಮೂರನೇ ಬಾರಿಗೆ ತುಮಕೂರು ತಂಡವನ್ನು ಮಣಿಸಿ ವಿಜೇತರಾಗಿದ್ದು, ಇದೇ ತಿಂಗಳು 22 ರಿಂದ 25 ರ ವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ತಂಡದ ತರಬೇತುದಾರ ನವೀನ್‌ಕುಮಾರ್ (trainer Naveen kumar) ಹಾಗೂ ಕ್ರೀಡಾಪಟುಗಳಿಗೆ ಆರ್.ಇ,ಎಸ್ ಸಂಸ್ಥೆ ಅಧ್ಯಕ್ಷರಾದ ಹೆಚ್ ಕೆ ಶ್ರೀಕಂಠು ( H K Srikanta), ಕಾರ್ಯದರ್ಶಿ ಪುಟ್ಟಸಾಮಿ, ಖಜಾಂಚಿಯಾದ ಮಂಜುನಾಥ್, ಸಂಸ್ಥೆಯ ಅಭಿಯಂತರ ಜಯತ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಸಂಜಯ್. ಶಿವು. ಶ್ರೀನಿಧಿ ಸ್ವಾಮಿ. ದೇವರಾಜ್. ಪ್ರಕಾಶ್. ಲಕ್ಷ್ಮೀ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು. ಮುಖ್ಯೋಪಾಧ್ಯಾಯರು, ಅಭಿನಂದಿಸಿದ್ದಾರೆ.

Share

Leave a Reply

Your email address will not be published. Required fields are marked *