ಗಾಂಧಿ ಎ ಬಿ ನಿರ್ದೇಶನದ ಪ್ರೇಮಂ ಮಧುರಂ
ಹೊಸಬರು ನಟಿಸಿರುವ “ಪ್ರೇಮಂ ಮಧುರಂ”(Premam Madhuram) ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಚಿತ್ರತಂಡವು ಸುದ್ದಿಗೋಷ್ಠಿಯನ್ನು ಏರ್ಪಡಿಸಿ, ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿತ್ತು.
ರೂಬಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಅರಗೂಡ ಶೇಖರ್ ರೆಡ್ಡಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಗಾಂಧಿ ಎ ಬಿ (Gandhi A B) ಅವರು ನಾಯಕನಾಗಿ ನಟಿಸುವುದರ ಜತೆಗೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಐಶ್ವರ್ಯ ದಿನೇಶ್ ಹಾಗೂ ಅನುಷಾ ನಾಯಕಿಯರಾಗಿ ನಟಿಸಿದ್ದಾರೆ.
ಶಾಲೆ ಮತ್ತು ಕಾಲೇಜ್ ದಿನಗಳಲ್ಲಿ ಆಗುವ ಪ್ರೀತಿಯಲ್ಲಿ ಏನೆಲ್ಲ ಆಗುತ್ತದೆ ಎಂಬ ಕಥಾಹಂದರ ಇಟ್ಟುಕೊಂಡು ತಯಾರಾಗುವ ಈ ಸಿನಿಮಾ ಈಗಿನ ಯೂತ್ಸ್ ಗೆ ಚಿತ್ರ ಕನೆಕ್ಟ್ ಆಗುತ್ತದೆಯಂತೆ.
“ಎಂಬಿಎ ಮುಗಿಸಿ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಈ ಚಿತ್ರದ ಅರ್ಧ ಕಥೆಯನ್ನು ನಿರ್ಮಾಪಕರು ಕೇಳಿ ಚಿತ್ರವನ್ನು ನಿರ್ಮಾಣ ಮಾಡಿದರು, ನಿಮ್ಮಲ್ಲಿ ಪ್ರತಿಭೆಯಿಂದೆ ಹಾಗೂ ಉತ್ಸಹ ಇದೆ ಈ ಚಿತ್ರದಿಂದ ನಿಮಗೆ ಯಶಸ್ವಿ ಸಿಗಲ್ಲಿ ಎಂದು ನಿರ್ಮಾಪಕರು ನಮಗೆ ಹೇಳಿದರು“ ಎಂದು ನಿರ್ದೇಶಕ ಗಾಂಧಿ ಅವರು ಹೇಳಿದರು.
5 ಹಾಡುಗಳಿದ್ದು ವಿಶಾಲ್ ಆಲಾಪ ಸಂಗೀತ ನೀಡಿದರೆ. ಮಂಜುನಾಥ್ ಹೆಗಡೆ ಛಾಯಾಗ್ರಹಣ, ಸಂಜೀವ್ ಜಾಗಿರ್ದಾರ್ ಸಂಕಲನ ಚಿತ್ರಕ್ಕಿದೆ. ಬೈಂದೂರು,ಕಾಲ್ತೋಡು ಮಂಗಳೂರು, ಬೆಂಗಳೂರು, ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ.
