ಹುಬ್ಬಳ್ಳಿಯಲ್ಲಿ ಕಿಚ್ಚನ ಮಾರ್ಕ್ ಸಿನಿಮಾದ ಪ್ರೀ ರಿಲೀಸ್
Mark move pre Release Event
ಮ್ಯಾಕ್ಸ್ ಚಿತ್ರದ ನಂತರ ಕಿಚ್ಚ ಸುದೀಪ್ ತರೆಮೇಲೆ “ಮಾರ್ಕ್” ಆಗಿ ಅಬ್ಬರಿಸಲು ಇದೇ ತಿಂಗಳು ಡಿಸೆಂಬರ್ 25 ರಂದು ದಿನ ಫಿಕ್ಸ್ ಆಗಿದೆ. “ವಿಜಯ್ ಕಾರ್ತಿಕೇಯ” ನಿರ್ದೇಶನದ ಮಾರ್ಕ್ ಮೂವಿ ಚಿತ್ರದ ಪ್ರಚಾರ ನಡೆಯುತ್ತಿದ್ದು, ಇದರ ಭಾಗವಾಗಿ ಚಿತ್ರತಂಡ 20 ರಂದು ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಿಚ್ಚ ಸುದೀಪ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹುಬ್ಬಳ್ಳಿಗೆ ಬರ್ತಿದ್ದಾರೆ. ನೆಹರು ಮೈದಾನದಲ್ಲಿ ಮಾರ್ಕ್ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆ ಆಗಿದ್ದು, ಸಿನಿಪ್ರಿಯರಿಗೆ ಇಷ್ಟವಾಗಿದ್ದು ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.
ಮ್ಯಾಕ್ಸ್ ಚಿತ್ರದ ಹಿಟ್ ನಂತರ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಜೋಡಿ ಒಂದಾಗಿ ಮಾಡಿರುವ ಮಾರ್ಕ್ ಚಿತ್ರ ದೊಡ್ಟಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಸತ್ಯ ಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಮೂಲಕ ಮಾರ್ಕ್ ಚಿತ್ರ ತಯಾರಾಗಿದ್ದು. ಸುದೀಪ್, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ, ಯೋಗಿ ಬಾಬು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ಚಿತ್ರದ “ಮಸ್ತ್ ಮಲ್ಲಿಕ” ಸಾಂಗ್ ಟ್ರೇಡ್‌ಗಿನಲ್ಲಿ ಇದೆ.