ನೋ ಕೊಕೇನ್ ಚಿತ್ರೀಕರಣದಲ್ಲಿ

0
WhatsApp Image 2025-07-16 at 6.33.12 PM

suddinota news

ಫೈಟ್ ಮಾಸ್ಟರ್ ಕೌರವ ವೆಂಕಟೇಶ್ ಮೊದಲ ಬಾರಿ ಆ್ಯಕ್ಷನ್-ಕಟ್ ಹೇಳುತ್ತಿರುವ ದಿ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಟ್ಯಾಗ್ ಲೈನ್ ಇರುವ “ನೋ ಕೊಕೇನ್” ಚಿತ್ರದ ಚಿತ್ರೀಕರಣವು ಬನ್ನೇರುಘಟ್ಟ ರಸ್ತೆಯಲ್ಲಿರುವ ವೈಟ್ ಹೌಸ್ ಬಿಲ್ಡಿಂಗ್‌ನಲ್ಲಿ ನಡೆಯುತ್ತಿತ್ತು. ಬಿಗ್ ಬಾಸ್ ವಿನ್ನರ್ “ಪ್ರಥಮ್” ಕಥೆ,ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ.

ಚಿತ್ರೀಕರಣದಲ್ಲಿ ಶೋಭ್‌ರಾಜ್, ಸಿದ್ಲಿಂಗು ಶ್ರೀಧರ್, ಜಗದೀಶ್‌ಕೊಪ್ಪ ಜತೆ ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯ ಭಗವಾನ್ ಕಲಾವಿದರುಗಳು ಪಾಲ್ಗೊಂಡಿದ್ದರು. ಶೋಭರಾಜ್ ಅವರು ಪೊಲೀಸ್ ಕಮಿಷನರ್ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೂರ್ಯಭಗವಾನ್ ಅವರು ಗೃಹ ಸಚಿವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ಕೌರವ ವೆಂಕಟೇಶ್ ಮಾತನಾಡಿ ” ಕೇಂದ್ರ ಸಚಿವರಾಗಿ ಸಿದ್ಲಿಂಗು ಶ್ರೀಧರ್, ಪೊಲೀಸ್ ಕಮಿಷನರ್ ಹಾಗೂ ಗೃಹ ಸಚಿವ ಕೊಕೇನ್ ವಿಷಯದ ಬಗ್ಗೆ ಮೀಟಿಂಗ್ ಮಾಡುತ್ತಿರುವಾಗ, ನಾಯಕ ಪ್ರಥಮ್‌ಗೆ ಮುಖ ಹಾಗೂ ಮೈಗೆಲ್ಲಾ ರಕ್ತದ ಕಲೆ ಆಗಿರುತ್ತದೆ ಸೆಕ್ಯೂರಿಟ್‌ಗಳನ್ನು ಎದುರಿಸಿ ಒಳಗೆ ಪ್ರವೇಶಿಸುತ್ತಾನೆ. ನಮ್ಮ ಮೇಲೆ ದಾಳಿ ಮಾಡಲು ಬಂದಿರುತ್ತಾನೆ ಎಂದು ಅನುಮಾನಿಸಿ ಕಮಿಷನರ್ ಫೈರಿಂಗ್ ಮಾಡುವ” ದೃಶ್ಯ ಚಿತ್ರೀಕರಿಸಲಾಗುತ್ತಿದೆ ಎಂದರು.

ಪ್ರಥಮ್ ಮಾತನಾಡಿ “ಇದು ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ, ಕೌರವ ವೆಂಕಟೇಶ್ ಅವರ ಚಿತ್ರ ಎಂದರೆ ಸೆಟಿಮೆಂಟ್ ತೆಗೆಯುಕ್ಕೆ ಆಗಲ್ಲ, ಅವರು ಅಂದರೆ ಮಾಸ್ ಎನ್ನುತ್ತ ಸೂರ್ಯಭಗವಾನ್ ಅವರು ಕನ್ನಡದಲ್ಲಿ ಇದು ಮೊದಲ ಚಿತ್ರ” ಎಂದರು.

ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 22 ದಿನಗಳ ಚಿತ್ರೀಕರಣ ಮುಗಿದಿದ್ದು, ಕ್ಲೈಮ್ಯಾಕ್ಸ್ ದೃಶ್ಯವನ್ನು ಮಂಗಳೂರಿನಲ್ಲಿ ಹಾಗೂ ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವುದಾಗಿ ಚಿತ್ರತಂಡ ಯೋಜನೆ ಮಾಡಿಕೊಂಡಿದೆ. ನಾಯಕಿಯಾಗಿ ರಚಿತಾ ನಟಿಸಿದ್ದಾರೆ. ಡಿ ಆರ್ ಕಲ್ಕಿ ಅಭಿಷೇಕ್ ಸಂಗೀತ, ಛಾಯಾಗ್ರಹಣ ಸಾಮ್ರಾಟ್, ರಘು ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *