ಹೊಸ ಧಾರಾವಾಹಿ ವಸುದೇವ ಕುಟುಂಬ

0
WhatsApp Image 2025-09-09 at 2.35.27 PM

New Serial in Star Suvarna

ಸ್ಟಾರ್ ಸುವರ್ಣವಾಹಿನಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರೋಮ್‌ಗಳಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಹೊಸ ಧಾರಾವಾಹಿ “ವಸುದೇವ ಕುಟುಂಬ” 15 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
“ಕೋರಮಂಗಲ ಟಾಕೀಸ್” ಬ್ಯಾನರ್ ಅಡಿಯಲ್ಲಿ ಅನಿಲ್ ಕೋರಮಂಗಲ ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದಾರೆ.


ಧಾರಾವಾಹಿಯ ಕಥೆ..
ವಸುದೇವನ ಕುಟುಂಬದವು ಸಂತೋಷದಿಂದ ಇರುತ್ತದೆ. ಹಳ್ಳಿಯಲ್ಲಿ ಊರ ಹಬ್ಬದ ಸಂಭ್ರಮದ ಜತೆಗೆ ದೊಡ್ಡಮಗಳ ಮದುವೆಯ ಸಿದ್ದತೆ ಜೋರಾಗಿರುತ್ತದೆ. ಆದರೆ ಖುಷಿಯಾಗಿದ ಕುಟುಂಬದಲ್ಲಿ ಅನಿರೀಕ್ಷಿತವಾಗಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಇದರಿಂದ ಕುಟುಂಬವು ಸಂಕಷ್ಟಕ್ಕೆ ಬರುತ್ತದೆ.
ಇಂತಹ ಸಮಯದಲ್ಲಿ ನಾಯಕಿಯಾದ ಸ್ವಾತಿ ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ ಹಾಗೂ ಅಕ್ಕ-ತಂಗಿಯರಿಗೆ ಆಸರೆಯಾಗಿ, ದು:ಖವನ್ನು ಮರೆತು, ತನ್ನ ಕುಟುಂಬದ ನಿರ್ವಹಣೆ ಹೇಗೆ ಮಾಡುತ್ತಾಳೆ..? ಎಂಬುದೇ “ವಸುದೇವ ಕುಟುಂಬ”ದ ಕಥೆ


27 ವರ್ಷದ ನಂತರ ಅವಿನಾಶ್ ಕಿರುತೆರೆಯಲ್ಲಿ ನಟನೆ..
ವಸುದೇವ ಕುಟುಂಬ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ 27 ವರ್ಷಗಳ ನಂತರ ಮತ್ತೇ ಧಾರಾವಾಹಿಯಲ್ಲಿ ನಟಿಸುತ್ತಿರುವುದು ವಿಶೇಷ.
ಪತ್ರಕರ್ತರ ಜತೆ ಮಾತನಾಡಿ ನಾನು 27 ವರ್ಷಗಳ ಹಿಂದೆ ಮಾಯಮೃಗ ಧಾರಾವಾಹಿಯಲ್ಲಿ ನಟಿಸಿದಾಗ ಮಾಳವಿಕ ಸಿಕ್ಕಿದಳು, ಈ ಧಾರಾವಾಹಿಯಲ್ಲಿ ಸುಂದರವಾದ ನಾಲ್ಕು ಹೆಣ್ಣು ಮಕ್ಕಳು ಸಿಕ್ಕಿದ್ದಾರೆ”ಹಾಗೂ “ನನ್ನ ಹೆಂಡತಿ ಮಾಳವಿಕಾ ಬೈದಿದ್ದಕ್ಕೆ ಈ ಧಾರಾವಾಹಿ ಒಪ್ಪಿಕೊಂಡೆ ಎಂದರು.

ವಸುದೇವ ಕುಟುಂಬದ ಸದಸ್ಯರು

ವಸುದೇವ ಕುಟುಂಬದ ಸದಸ್ಯರು..
ಅವಿನಾಶ್ ತಾಯಿಯ ಪಾತ್ರದಲ್ಲಿ ಮಾಲತಿ ಸುದೀರ್ ಹಾಗೂ ಹೆಂಡತಿಯ ಪಾತ್ರದಲ್ಲಿ ಜನಪ್ರಿಯ ನಟಿ ಅಂಜಲಿ, ಮಕ್ಕಳ ಪಾತ್ರದಲ್ಲಿ ಭಾವನಾ ಪಾಟೇಲ್, ಚೈತ್ರಾ ತೋಟದ್, ಬೃಂದಾ ಕಶ್ಯಪ್, ಆರಾಧ್ಯ, ನಟಿಸುತ್ತಿದ್ದಾರೆ.
ಇತರ ಪಾತ್ರಗಳಲ್ಲಿ ಬಿಗ್ ಬಾಸ್ ಖ್ಯಾತಿಯ ಹಂಸ ನಾರಾಯಣಸ್ವಾಮಿ, ಭಗತ್ ಹಾಗೂ ಆರ್ ಜೆ ಅನೂಪ್ ಸೇರಿದಂತೆ ದೊಡ್ಡ ತಾರಾಬಳಗವನನ್ನು ಧಾರಾವಾಹಿಯಲ್ಲಿ ನೋಡಬಹುದು.

Share

Leave a Reply

Your email address will not be published. Required fields are marked *