ನವಿಲುಗರಿ ನವೀನ್ ಹೊಸ ಚಿತ್ರಕ್ಕೆ ಭರ್ಜರಿ ಚೇತನ್ ಹಾಡು..
ಹಲವು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿ, ನ್ಯಾಷನಲ್, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗಳನ್ನು ಪಡೆದಿರುವ ನಿರ್ದೇಶಕ “ನವಿಲುಗರಿ ನವೀನ್ ಪಿ ಬಿ” ಇದೀಗ “ಜನರಿಂದ “ನಾನು ಮೇಲೆ ಬಂದೆ” ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇನ್ನೂ ಹೆಸರಿಡದ ಚಿತ್ರಕ್ಕೆ ಭರ್ಜರಿ ಚೇತನ್‌ಕುಮಾರ್ ಅವರು ರೋಮ್ಯಾಂಟಿಕ್ ಹಾಡನ್ನು ಬರೆಯುತ್ತಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಿಗೆ ಚೇತನ್ ಹಾಡನ್ನು ಬರೆದಿದ್ದು, ಆ ಹಾಡುಗಳು ಹಿಟ್ ಆಗಿವೆ. ಈ ಹಾಡನ್ನು ಕೇಳಲು ಸ್ವಲ್ಪ ದಿನ ಕಾಯಬೇಕಾಗಿದೆ.
ಇನ್ನೂ ಈ ಹಾಡಿಗೆ ಯುವ ಸಂಗೀತ ನಿರ್ದೇಶಕ “ಪ್ರಣವ್ ಸತೀಶ್” ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯಕ್ಕೆ ಜನರಿಂದ ನಾನು ಮೇಲೆ ಬಂದೆ ಸಿನಿಮಾದ ಕೆಲಸ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಈ ಚಿತ್ರದ ಮುಗಿದ ನಂತರ ಹೊಸ ಚಿತ್ರ ಸೆಟ್ಟೆರಲಿದ್ದು. ಚಿತ್ರದ ಟೈಟಲ್ ಅನ್ನ ಗಣ್ಯರಿಂದ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.