ಲೆಜೆಂಡ್ ಡೈರೆಕ್ಟರ್ ಸಿನಿಮಾಗೆ ಸಂದ ಮತ್ತೊಂದು ಗರಿ
ಲೆಜೆಂಡ್ ಡೈರೆಕ್ಟರ್ ಸಿನಿಮಾ ನವೆಂಬರ್ 2024 ರಲ್ಲಿ ತೆರೆ ಕಂಡು ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿತ್ತು ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡು ಸದ್ದು ಮಾಡಿದ ನಂತರ ಇತ್ತೀಚೆಗಷ್ಟೇ ವಿಶ್ವ ವಿಖ್ಯಾತ ದಸರಾ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಗೆದ್ದಿತ್ತು.
ಕನ್ನಡ ಚಿತ್ರರಂಗದ ಹೆಸರಾಂತ ಅವಾರ್ಡ್ ಗಳಲ್ಲಿ ಒಂದಾದ ಚಿತ್ರ ಸಂತೆ 2025 ಫಿಲಂ ಅವಾರ್ಡ್ ನಲ್ಲಿ ಕೂಡ ಲೆಜೆಂಡ್ ಡೈರೆಕ್ಟರ್ ಸಿನಿಮಾದ ನಟ, ನಿರ್ಮಾಪಕ, ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಅವರಿಗೆ ಈ ವರ್ಷದ ವಿಮರ್ಶೆಗಳ ಪ್ರಕಾರ ಮೋಸ್ಟ್ ಪ್ರಾಮಿಸಿಂಗ್ ಡೈರೆಕ್ಟರ್ ಆಫ್ ದಿ ಇಯರ್ ಎಂದು ಪ್ರಶಸ್ತಿ ಪಡೆದಿದ್ದಾರೆ.
ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಅಭಿಮಾನಿಗಳ ಮನಸ್ಸು ಗೆದ್ದಿತ್ತು.
ಈಗ ಒಂದರ ಹಿಂದೆ ಮತ್ತೊಂದು ಪ್ರಶಸ್ತಿಗಳನ್ನು ಗಳಿಸುತ್ತಾ ಬರುತ್ತಿದೆ. ಅವಾರ್ಡ್ ಪಡೆದು ಮಾತನಾಡಿದ ನಿರ್ದೇಶಕ ಈ ಅವಾರ್ಡ್ ಸಿಕ್ಕಿದ್ದು ಬಹಳ ಸಂತೋಷವಾಯಿತು ಅದರೊಂದಿಗೆ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ. ಈ ಅವಾರ್ಡ್ ಅಭಿಮಾನಿ ಅನ್ನದಾತರಿಗೆ ಅರ್ಪಣೆ ಎಂದಿದ್ದಾರೆ.
ಲೆಜೆಂಡ್ ಡೈರೆಕ್ಟರ್ ಸಿನಿಮಾವು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ನವಿಲುಗರಿ ನವೀನ್ ಪಿ ಬಿ ಅವರೇ ಕಥೆ, ಚಿತ್ರ-ಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀಮತಿ ವಿಶಾಲ ಸತೀಶ್ ರವರು ಸಹ ನಿರ್ಮಾಪಕರಾಗಿದ್ದಾರೆ.
ಗೌರವಾನ್ವಿತ ಪಾತ್ರದಲ್ಲಿ ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜು, ಸನತ್, ರಾಜ್ ಮನೀಷ್, ಸೆಂಚುರಿ ಡೈರೆಕ್ಟರ್ ಓಂ ಸಾಯಿ ಪ್ರಕಾಶ್ , ಉದ್ಭವ ಕೋಡ್ಲು ರಾಮಕೃಷ್ಣ, ಸೂಪರ್ ಸ್ಟಾರ್ ರಜನಿ ಕಾಂತ್ ಗೆಳೆಯ ರಾಜ್ ಬಹದ್ದೂರ್, ತಮಿಳು ಹಿರಿಯ ನಟ ಸತ್ಯಜಿತ್, ಪುಟ್ಟಣ್ಣ ಕಣಗಾಲ್ ತಮ್ಮ ರಮಣ ಕಣಗಾಲ್, ಪ್ರವೀಣ್ ಕೃಪಾಕರನ್, ಶಶಿಧರ್ ಕೋಟೆ, ಶಿವಕುಮಾರ್ ಆರಾಧ್ಯ, ಬಹುಭಾಷಾ ನಟ ಸಂದೀಪ್ ಮಲಾನಿ, ಬೆಳ್ಳುಳ್ಳಿ ಕಬಾಬ್ ಚಂದ್ರಣ್ಣ, ಅನಿಲ್ ಕುಮಾರ್ (ಬಾಬ್ಬಿ) ಇನ್ನೂ ಅನೇಕರು ನಟಿಸಿದ್ದಾರೆ.