ಕಟ್ಲೆ ಫೆಬ್ರವರಿ 6 ರಂದು ಬಿಡುಗಡೆ
ಶ್ರೀವಿಧಾ ಅಭಿನಂದನ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಹಾಗೂ ಹಾಸ್ಯ ಕಲಾವಿದ ಕೆಂಪೇಗೌಡ ಮೊದಲಬಾರಿ ನಾಯಕನಾಗಿ ನಟಿಸಿರುವ ‘ಕಟ್ಲೆ’ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆಯಿತು. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಯಣ್ , ಮಂಡ್ಯ ಶಾಸಕ ರವಿಕುಮಾರ್‌ಗೌಡ(ಗಾಣಿಗ), ಬಿಗ್‌ಬಾಸ್ ಪ್ರಥಮ್, ಕಾಕ್ರೋಚ್ ಸುಧಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಶ್ರೀವಿಧಾ ಮಾತನಾಡಿ… “ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥ ಇರುತ್ತದೆ. ನಮ್ಮ ಸಿನಿಮಾಕ್ಕೆ ಅವಧಿ ಎಂದು ಹೇಳಲಾಗಿದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಅದು ಸರಿಯಾಗಿ ಆಗಲಿಲ್ಲ ಅಂದ್ರೆ, ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಪೂರ್ಣ ತಿಳಿಯಲು ನೀವುಗಳು ಟಾಕೀಸ್‌ಗೆ ಬರಬೇಕು“. ಎಂದರು.
ಚಿತ್ರದ ನಾಯಕ ಕೆಂಪೇಗೌಡ ಮಾತನಾಡಿ.. “ನಿರ್ಮಾಪಕರು ಕಾಮಿಡಿ ಕಲಾವಿದನನ್ನು ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹಾರರ್,ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವು ಇದ್ದರೂ ಸಿನಿಮಾವು ಇದಾಗಿರುವುದಿಲ್ಲ. ಫುಲ್ ಮೀಲ್ಸ್ನಂತೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೊನೆಯ ದೃಶ್ಯಗಳು ನೋಡುಗರ ಕಣ್ಣನ್ನು ಒದ್ದೆ ಮಾಡಿಸುತ್ತದೆ“ ಎಂದರು.
ಮಂಚೂಣಿ ರಾಜಕೀಯ ಪಕ್ಷದ ಕಾರ್ಯಕರ್ತ, ಸಮಾಜ ಸೇವಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹೊಸಕೋಟೆ ಮೂಲದ ಭರತ್‌ಗೌಡ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದು.. ಸನ್ಮಿತ ಮತ್ತು ಅಮೃತ ನಾಯಕಿಯರಾಗಿ ನಟಿಸಿದ್ದಾರೆ.
ಇನ್ನೂ ಮುಖ್ಯ ಪಾತ್ರದಲ್ಲಿ ಹರ್ಷಿಕಾಪೂರ್ಣಚ್ಚಾ. ಇವರೊಂದಿಗೆ ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್, ಗಣೇಶ್‌ರಾವ್ ಕೇಸರಕರ್,ಪವನ್‌ಕುಮಾರ್, ಬಿರಾದಾರ್, ಎಂ.ಎಸ್.ಉಮೇಶ್,ಯತಿರಾಜ್, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ.
ಬೆಂಗಳೂರು, ಸಿರ್ಸಿ, ಮಲೆನಾಡು ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ ಚಿತ್ರಕ್ಕಿದೆ.
ಸಚಿತ್ ಫಿಲಂಸ್‌ನ ವೆಂಕಟ್‌ಗೌಡ ಸುಮಾರು 75 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ.