RES :ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ರೂರಲ್ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ
ಕನಕಪುರ ತಾಲೂಕಿನಲ್ಲಿಯೇ ಪ್ರಸಿದ್ದಿಯಾಗಿರುವ ರೂರಲ್ ಪದವಿ ಕಾಲೇಜಿನ 2025-26ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಐ ಪಿ ಎಸ್ ಅಧಿಕಾರಿ “ಎಂ ಮುತ್ತುರಾಜ್” ಹಾಗೂ ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ “ಶಿವಚಿತ್ತಪ್ಪ” ಆಗಮಿಸಿದರು.
ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿಯಾದ ಪ್ರೊಫೆಸರ್ ಶಿವಚಿತ್ತಪ್ಪ ಮಾತನಾಡಿ“ನಮ್ಮ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮೂರು ಕಾಲೇಜ್‌ಗಳಿವೆ, ಆಮೂರು ಕಾಲೇಜಿನ ಪ್ರಿನ್ಸಿಪಾಲ್ ಇದೇ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾರೆ.
ವಿದ್ಯಾರ್ಥಿಳಿಗೆ 3 ಗುರಿಗಳು ಇರಬೇಕು ಮೊದಲನೇಯದು ಶೈಕ್ಷಣಿಕ ಗುರಿ ಎಷ್ಟು ಜನ ಸಮಸ್ಯೆ ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ಸಮಸ್ಯೆ ಸರ್ ಅಂತ ಹೇಳ್‌ತ್ತಾರೆ. ಎಲ್ಲಾರಿಗೂ ಸಮಸ್ಯೆ ಇರುತ್ತದೆ.. ಅದಕ್ಕೆ ನಿಮ್ಮ ಜ್ಞಾನ ಆ ಸಮಸ್ಯೆಯನ್ನು ಹೋಗಲಾಡಿಸುವ ಹಾಗೇ ಇರಬೇಕು. ಎರಡನೇಯದು ಶಿಸ್ತಿನಿಂದ ತರಗತಿಗೆ ಹಾಜರಾಗುವುದು ವಿದ್ಯಾರ್ಥಿಗಳ ಮತ್ತೊಂದು ಗುರಿಯಾಗಿರಬೇಕು ಮೂರನೇಯದು ಸಮಯ ಪಾಲನೆಗೆ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವವಿರಬೇಕು“ ಎಂದು ಹೇಳಿದರು.
ಐ ಪಿ ಎಸ್ ಅಧಿಕಾರಿ ಎಂ ಮುತ್ತುರಾಜ್ ” “ನಾನು ಸುಮಾರು ಕಾರ್ಯಕ್ರಮಗಳಿಗೆ ಹೋಗಿದ್ದಿನಿ ಈ ತರ ಕಾರ್ಯಕ್ರಮ ತುಂಬಾ ಭಾವಪೂರ್ಣವಾಗಿದೆ. ನಾವು ಹುಟ್ಟಿರು ಜಾಗ, ಓದಿರು ಜಾಗ, ಸ್ನೇಹಿತರು ಹಾಗೂ ಗುರುಗಳ ಮಧ್ಯೆ ನಮ್ಮನ್ನು ಕರೆದು ಸನ್ಮಾನ ಮಾಡ್‌ತ್ತಾರೆ ಎಂದರೆ ಅಂದು ಜೀವನದ ಒಂದು ಪುಣ್ಯನೇ ಇರಬೇಕು ಎಂದರು.
ನಾನು ಕೂಡ ಹಳ್ಳಿಗಾಡಿನ ಪ್ರದೇಶದಿಂದ ಬಂದವನು ರೂರಲ್ ಕಾಲೇಜಿನಲ್ಲಿ ಪಿಯುಸಿ ಮಾಡಿದವನು, ಪ್ರಸುತ್ತ ರೂರಲ್ ಕಾಲೇಜಿನಲ್ಲಿ ನಿಮಗೆ ನನಗಿಂತ ಹೆಚ್ಚಿನ ಅವಕಾಶಗಳಿದೆ ಅದನ್ನು ಗಮನದಲ್ಲಿಟ್ಟುಕೊಂಡು ಗುರು ಹೇಳಿದಂತೆ ನಡೆದರೆ ಯಶಸ್ಸು ಬಹುಬೇಗ ಸಿಗುತ್ತದೆ ಹಾಗೂ ಮುಖ್ಯವಾಗಿ ಮನುಷ್ಯರಿಗೆ ಮುಖ್ಯವಾಗಿ ತೋಳ್ಬಲ, ಮನೋ ಬಲ, ಆತ್ಮಬಲ 3 ಶಕ್ತಿ ಇರಬೇಕು” ಎಂದರು.
ಆರ್ ಇ ಎಸ್ ನ ಅಧ್ಯಕ್ಷರಾದ ಶ್ರೀ ಎಚ್ ಕೆ ಶ್ರೀಕಂಠ ಅವರು ಮಾತನಾಡಿ“ ವಿದ್ಯಾರ್ಥಿಗಳಿಗೆ ಶಿಸ್ತು, ಒಳ್ಳೆಯ ಮೌಲ್ಯಗಳನ್ನು ಬೆಳೆಸುವುದು ಅವರ ವ್ಯಕ್ತಿತ್ವಗಳನ್ನು ಬಲಪಡಿಸುವುದು ಪ್ರತಿಯೊಂದು ವಿದ್ಯಾಸಂಸ್ಥೆಗೂ ಇದೆ. ನಾನು ಅಧ್ಯಕ್ಷನಾದ ನಂತರ ಸಂಸ್ಥೆಯ ಅಭಿವೃದ್ಧಿಯ ಜೊತೆಗೆ ಮಕ್ಕಳ ಅಭಿವೃದ್ಧಿಗೂ ಸಹ ನಿರಂತರವಾಗಿ ಶ್ರಮಿಸುತ್ತಿದ್ದೇನೆ“ ಎಂದರು.

ಇದೇ ಸಂದರ್ಭದಲ್ಲಿ 2024-2025 ಸಾಲಿನ ಬಿಎ, ಬಿಕಾಂ, ಬಿ ಎಸ್ ಸಿ, ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕರಾದ ಕೆ ಬಿ ನಾಗರಾಜು. ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ ಟಿ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ಶ್ರೀ ದೇವರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಅಪ್ಪಾಜಿ, ಡಾಕ್ಟರ್ ಕೆಂಪೇಗೌಡ, ಎ ಪಿ ಪ್ರಕಾಶ್, ಭಾಗಿಯಾಗಿದರು.