ಎಕ್ಕ ಸನ್NXT ನಲ್ಲಿ ನಂ 1 ಟ್ರೆಂಡಿಂಗ್

0
20251117_000635

ಯುವ ಚಿತ್ರದ ನಂತರ ಯುವರಾಜ್‌ಕುಮಾರ್ ನಟಿಸಿದ ಬಹು ನಿರೀಕ್ಷೆಯ ಚಿತ್ರ “ಎಕ್ಕ” ಜುಲೈ ತಿಂಗಳಲ್ಲಿ ತೆರೆಕಂಡು ಯಶಸ್ವಿ ಕಂಡಿತು. ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಫಿಲಂಸ್ ಮತ್ತು ಪಿಆರ್‌ಕೆ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದರು.

ಚಿತ್ರವನ್ನು ನೋಡದೆ ಇರುವವರು ಈಗ ನೋಡಲು ಅವಕಾಶವಿದೆ. ಅದು ಎಲ್ಲಿ ಎಂದರೆ.. ದಕ್ಷಿಣ ಭಾರತದ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್ ಆಗಿರುವ ಸನ್NXT ನಲ್ಲಿ “ಎಕ್ಕ” ಚಿತ್ರವು ಇದೇ ನವೆಂಬರ್ 13ರಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಲ್ಲಿ ಬಿಡುಗಡೆ ಆಗಿದ್ದು, ನಂ 1 ಟ್ರೆಂಡಿಂಗ್ ನಲ್ಲಿ ಇದೆ.

ಆಕ್ಷನ್ ಜಾನರ್‌ನ ಎಕ್ಕ ಚಿತ್ರದಲ್ಲಿ ಯುವರಾಜ್‌ಕುಮಾರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಚರಣ್‌ರಾಜ್ ಸಂಗೀತ ಸಂಯೋಜನೆಯಲ್ಲಿ ಬ್ಯಾಂಗಲ್ ಬಂಗಾರಿಹಾಡು ವೈರಲ್ ಆಗಿ ಸದ್ದು ಮಾಡಿತ್ತು. ಕನ್ನಡ ಅಲ್ಲದೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿಯು ಸನ್NXT ನಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಯುವರಾಜ್‌ಕುಮಾರ್ & ಸಂಪದಾ ಹುಲಿಮನೆ

ಯಶಸ್ವಿ ಚಿತ್ರಗಳಾದ ಕೃಷ್ಣಂ ಪ್ರಣಯ ಸಖಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೂಡು, ಅಂಜನಿಪುತ್ರ, ಟಗರು ಇನ್ನು ಮುಂತಾದ ಚಿತ್ರಗಳನ್ನು ವೀಕ್ಷಕರಿಗೆ ತೋರಿಸಿದ ಕೀರ್ತಿ ಸನ್NXTಗೆ ಸಲ್ಲುತ್ತದೆ.

ಯುವರಾಜ್‌ಕುಮಾರ್‌ಗೆ ಸಂಪದಾ ಹುಲಿಮನೆ ಹಾಗೂ ಸಂಜನ ಆನಂದ್ ನಾಯಕಿಯರಾಗಿ ನಟಿಸಿದರು.

4000+ ಚಿತ್ರಗಳು, 44+ ಲೈವ್ ಚಾನೆಲ್‌ಗಳು, ಟಿವಿ ಕಾರ್ಯಕ್ರಮಗಳು ಮತ್ತು ಪ್ರಯಾಣದಲ್ಲಿರುವಾಗ ಹೆಚ್ಚಿನ ಮನರಂಜನೆ ಸಿನಿಪ್ರಿಯರಿಗೆ ನೀಡುತ್ತಾ ಬಂದಿದೆ. ಸದ್ಯ ‘ಎಕ್ಕ’ ಸಿನಿಮಾವು ಸ್ರ‍್ಟೀಮಿಂಗ್ ಆಗುತ್ತಿರುವುದು ಸಂಸ್ಥೆಗೆ ಸಂತಸ ತಂದಿದೆ.

Share

Leave a Reply

Your email address will not be published. Required fields are marked *