ಚಾಮಯ್ಯ ಸನ್ ಆಫ್ ರಾಮಾಚಾರಿ ಚಿತ್ರದ ಟ್ರೇಲರ್ ಬಿಡುಗಡೆ

0
20250911_130043

ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರಾಧಾಕೃಷ್ಣ ಪಲ್ಲಕ್ಕಿ ನಿರ್ಮಾಣ ಮತ್ತು ನಿರ್ದೇಶನ ಮಾಡಿರುವ “ಚಾಮಯ್ಯ ಸನ್ ಆಫ್ ರಾಮಾಚಾರಿ” ಚಿತ್ರ ಟ್ರೇಲರ್ ಬಿಡುಗಡೆ ಆಗಿದೆ. ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿರುವ ಈ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.

ನಿರ್ದೇಶಕರಾದ ರಾಧಾಕೃಷ್ಣ ಪಲ್ಲಕ್ಕಿ ಅವರುಈ ಬಂಧನ ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ಚಿತ್ರದ ಕಥೆಯನ್ನು ಹೇಳಿದ್ದೆ, ಅವರು ಕಾಲವಾದ ನಂತರ ಚಿತ್ರವನ್ನು ಮಾಡುವುದು ಬೇಡವೆಂದು ಸುಮ್ಮನಿದ್ದೆ, ಒಮ್ಮೆ ಉತ್ತರ ಕರ್ನಾಟಕದಲ್ಲಿ ನಾಟಕ ನೋಡಲು ಹೋದಾಗ ಅಲ್ಲಿ ರಂಗಭೂಮಿಯ ಹಿರಿಯ ಕಲಾವಿದ ಜಯಶ್ರೀ ರಾಜ್ (ಜೂನಿಯರ್ ವಿಷ್ಣುವರ್ಧನ್) ನೋಡಿದಾಗ ಸಿನಿಮಾ ಮಾಡುವ ಯೋಚನೆ ಬಂದು, ಈ ಸಿನಿಮಾ ಮಾಡಿದರಂತೆ.

ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ (ಅಂಬರೀಷ್) ಮಗನಾಗಿ ಚೋಟಾ ಜಲೀಲ್ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ಪಾತ್ರವನ್ನು ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ನಟಿಸಿರುವುದು ವಿಶೇಷ.

ರಾಮಾಚಾರಿ ಪಾತ್ರದಲ್ಲಿ ಜಯಶ್ರೀರಾಜ್, ಪತ್ನಿಯಾಗಿ ಪ್ರೇಮಾಗೌಡ, ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ, ಮುಂದುವರಿದ ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್‌ಅರಸು. ಉಳಿದಂತೆ ಸೀನೂ ಮಾರ್ಕಳಿ, ವರಪ್ರಸಾದ ಶರ್ಮ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಭೂಮಿ ಕಲಾವಿದರು ನಟಿಸಿದ್ದಾರೆ.
ಡಾ.ಕುಮಾರಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ

Share

Leave a Reply

Your email address will not be published. Required fields are marked *