ಚಂದನ್ ನಿರ್ದೇಶನದ ಪ್ರಥಮ ಚಿತ್ರಕ್ಕೆ ಕಿಚ್ಚ ಸಾಥ್
ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಚಂದನ್ ನಿರ್ಮಾಣ ಮಾಡಿರುವ ಫ್ಲರ್ಟ್ ಚಿತ್ರವು ಮುಂದಿನ ತಿಂಗಳು 7 ರಂದು ಬಿಡುಗಡೆ ಆಗುತ್ತಿದೆ. ಚಿತ್ರದ ಟ್ರೇಲರ್ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರದ ಚಂದನ್ಗೆ ಶುಭಹಾರೈಸಿದರು.
ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕೆ ಚಂದನ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಚಂದನ್ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು ನಾಯಕಿಯರಾಗಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ಬಣ್ಣಹಚ್ಚಿದರೆ.
“ಚಂದನ್ ನಮ್ಮನೆ ಹುಡುಗ, ಆತ ಏನು ಮಾಡಿದರೂ ಇಷ್ಟವಾಗುತ್ತೆ. ನಾನು ನಿರ್ದೇಶನ ಮಾಡ್ತಾನೆ ಅಂದಾಗ ತುಂಬಾ ಖುಷಿಯಾಯ್ತು. ಈಗಾಗಲೇ ನಾನು ಸಿನಿಮಾನ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡುಬಂದಿದೆ. ಕಥೆಯಲ್ಲಿರುವ ಡೆಪ್ತ್ ಚೆನ್ನಾಗಿದೆ“ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಇನ್ನೂ ನಿರ್ದೇಶಕ ಚಂದನ್ ಮಾತನಾಡಿ “ಈ ಸಿನಿಮಾ ಆರಂಭದಿಂದಲೂ ಸುದೀಪ್ ಅವರು ನನಗೆ ತುಂಬಾ ಸಪೋರ್ಟ್ ಮಾಡುತ್ತ ಬಂದಿದ್ದಾರೆ. ಅಕ್ಟೋಬರ್ 25ಕ್ಕೆ ಬಿಗ್ ಬಾಸ್ ನಲ್ಲಿ ಸುದೀಪ್ ಅವರನ್ನು ನೋಡಿ 10 ವರ್ಷವಾಗುತ್ತೆ. ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಇದೆ.
ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ.ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ” ಎಂದರು.
ಈ ಚಿತ್ರದ “ನೀ ನನ್ನ ಜೀವ“ ಎಂಬ ಫ್ರೆಂಡ್ ಶಿಪ್ ಹಾಡನ್ನು ಇತ್ತೀಚೆಗೆ ರಿಲೀಸ್ ಆಗಿದ್ದು, ಈ ಹಾಡನ್ನು ಕಿಚ್ಚ ಸುದೀಪ್ ಅವರು ಹಾಡಿದ್ದಾರೆ ಹಾಗೂ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ ಜಡ್ಜ್ ಪಾತ್ರದಲ್ಲಿ ಹಿರಿಯನಟ ಅವಿನಾಶ್ ಕಾಣಿಸಿಕೊಂಡಿದ್ದು, ಶೃತಿ, ಸಾಧು ಕೋಕಿಲ, ಗಿರೀಶ್ ಶಿವಣ್ಣ, ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಸ್ಸಿ ಗಿಫ್ಟ್ ಚಿತ್ರದ 3 ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹೆಚ್.ಸಿ. ವೇಣು ಅವ ಛಾಯಾಗ್ರಹಣ ಚಿತ್ರಕ್ಕಿದೆ.