ಸೆನ್ಸಾರ್ ಗೆ ರೆಡಿಯಾದ “ಬ್ಯೂಟಿ”

0
20260317_130848.jpg

ಈ ಹಿಂದೆ 31 ಡೇಸ್ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಜ ರವಿಕುಮಾರ್ ಇದೀಗ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರೆ. ಚಿತ್ರಕ್ಕೆ “ಬ್ಯೂಟಿ” ಎಂದು ಶೀರ್ಷಿಕೆ ಇಡಲಾಗಿದೆ. ನೋಡಿ ಆನಂದಿಸಿ ಆದರೆ ಮುಟ್ಟ ಬೇಡಿ ಹಾಗೂ ನಾಶ ಮಾಡಬೇಡಿ ಎಂಬ ಅಡಿಬರಹ ಇರುವ ಈ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರವನ್ನು ಸೆನ್ಸಾರ್ ಗೆ ಕಳುಹಿಸಲು ತಯಾರಿ ನಡೆಸುತ್ತಿದೆ ಚಿತ್ರತಂಡ.

ಕಲ್ಪವೃಕ್ಷ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪಿ ಮುರಳಿ ಕೃಷ್ಣ ಅರ್ಪಿಸುತ್ತಿರುವ ಈ ಚಿತ್ರವನ್ನು ತನುಜ ಮುರಳಿ ಕೃಷ್ಣ ಅವರು ನಿರ್ಮಾಣ ಮಾಡುತ್ತಿದ್ದಾರೆ.
ನಾಯಕನಾಗಿ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ನಟಿಸಿದ್ದಾರೆ. ಕೊಲ್ಲೂರು, ಮೂಡಗಲ್, ಕುಮುಟಾ, ಮೇಲುಕೋಟೆ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವಾಗಿದೆ.

ನಿರ್ದೇಶಕ ರಾಜ ರವಿಕುಮಾರ್

ಚಿತ್ರದಲ್ಲಿ 5 ಹಾಡುಗಳಿದ್ದು, ವಿ ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದು, ಎಲ್ಲಾ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರುವುದು ವಿಶೇಷ. ವಿರೇಶ್ ಕುಮಾರ್ ಛಾಯಗ್ರಾಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ವೇಣಿ. ವಿ. ಮನೋಹರ್, ಚಿಲ್ಲರ್ ಮಂಜ, ಆನೇಕಲ್ ಮುನಿಯಪ್ಪ, ಅನ್ನಪೂರ್ಣ, ಅಂಜನಾ, ಮಂಜಯ್ಯ, ಚಕ್ರವರ್ತಿ ದಾವಣಗೆರೆ, ಮನ ಮೋಹನ್, ಶಿವಮೊಗ್ಗ ರಾಮಣ್ಣ, ವೈಭವ್ ನಾಗರಾಜ್, ಪ್ರಸಿದ್ಧ ಕನ್ನಡಿಗ, ಮಣಿ, ಪಾಂಡು, ಬೇಬಿ ಆಯುಷ್ಕಾ ಶೆಟ್ಟಿ, ಮಾಸ್ಟರ್ ಆರ್ಯ ಮುಂತಾದವರು ಅಭಿನಯಿಸಿದ್ದಾರೆ.


Share

Leave a Reply

Your email address will not be published. Required fields are marked *