ಅವನಿರಬೇಕಿತ್ತು ಟ್ರೈಲರ್ ರಿಲೀಸ್, ಜೂ.27ರಂದು ಚಿತ್ರ ತೆರೆಗೆ
ಟೈಟಲ್ಯಿಂದಲೇ ಗಮನ ಸೆಳೆದಿದ್ದ ಅಶೋಕ್ ಸಾಮ್ರಾಟ್ ಚೊಚ್ಚಲ ನಿರ್ದೇಶನ ಮಾಡಿರುವ “ಅವನಿರಬೇಕಿತ್ತು” ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಮುರಳಿ ನಿರ್ಮಾಣ ಮಾಡಿರುವ ಈ ಚಿತ್ರವು ಇದೇ ತಿಂಗಳು 27ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ.
ಈಗಾಗಲೇ ಸಿನಿಮಾದ ಎರಡು ಹಾಡುಗಳು ಹಿಟ್ ಆಗಿದ್ದು, ಇದೀಗ ಟ್ರೈಲರ್ ನೋಡಿದರೆ ಎಲ್ಲ ವರ್ಗದ ಜನರನ್ನು ಸೆಳೆಯುವಂತಿದೆ, ಟ್ರೈಲರ್ ಫ್ಯಾಮಿಲಿ, ಲವ್, ಕಾಮಿಡಿ ಜತೆ ಸಸ್ಪೆನ್ಸ್ ಮಿಶ್ರಣದಂತಿದ್ದು ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ.
ಭರತ್ ನಾಯಕ, ನಾಯಕಿಯಾಗಿ ಸೌಮ್ಯ ಜಾನ್ ಬಣ್ಣಹಚ್ಚಿದ್ದು. ಪ್ರಮುಖ ಪಾತ್ರಗಳಲ್ಲಿ ಮಂಜುನಾಥ್, ಲಕ್ಷ್ಮಿ ದೇವಮ್ಮ, ಪ್ರಶಾಂಸ್ ಸಿದ್ವಿ, ಕಿರಣ್ ಹೆಗಡೆ ನಟಿಸಿದ್ದಾರೆ. ಲೋಕಿ ತವಸ್ಯ ಸಂಗೀತ. ದೇವರಾಜ್ ಛಾಯಾಗ್ರಹಣ ಚಿತ್ರಕ್ಕಿದೆ
Movie Trailer