ಆಂಧ್ರ ಕಿಂಗ್ ತಾಲೂಕ ಪ್ರಚಾರ ಟ್ರೇಲರ್ ಬಿಡುಗಡೆ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ತೆಲುಗಿನ ರಾಮ್ ಪೋತಿನೇನಿ ನಟಿಸಿರುವ “ಆಂಧ್ರ ಕಿಂಗ್ ತಾಲೂಕ” ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು.
ಮಹೇಶ್ ಬಾಬು ನಿರ್ದೇಶನದ ಎರಡನೇ ಚಿತ್ರ ಇದ್ದಾಗಿದ್ದು. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಚಿತ್ರವು ಇದೇ ತಿಂಗಳು 27ರಂದು ಬಿಡುಗಡೆ ಆಗುತ್ತಿದೆ.
ಸ್ಟಾರ್ ಹೀರೋ ಹಾಗೂ ಅಭಿಮಾನಿಯ ನಡುವೆ ನಡೆಯುವ ಕಥೆಯಿರುವ ಈ ಚಿತ್ರದಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ಕಾಣಿಸಿಕೊಂಡರೆ, ಅವರ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ.. “ಎಲ್ಲಾ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಒಂದೊಂದು ಕಾರಣ ಇರುತ್ತದೆ. ಚಿತ್ರದ ಸಬ್ಬೆಕ್ಟ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣ ಆದರೆ ಈ ಚಿತ್ರ ಮಾಡಿರುವುದು ಅಭಿಮಾನಿಗಳಿ ಗೋಸ್ಕರ ಈ ಚಿತ್ರವನ್ನು ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ“ ಎಂದರು.

ನಾಯಕ ರಾಮ್ ಪೋತಿನೇನಿ ಮಾತನಾಡಿ.. “ಅಭಿಮಾನಿ ಹಾಗೂ ನಟ ನಡುವಿನ ಪ್ರೀತಿ ಜೊತೆ ಈ ಚಿತ್ರದಲ್ಲಿ ಎಮೋಷನ್ ಇದೆ. ಉಪ್ಪಿ ಸರ್ ಜೊತೆ ನಟಿಸಿರುವುದು ಖುಷಿ ಇದೆ. ಎಲ್ಲಾರು ನಮ್ಮ ಸಿನಿಮಾ ನೋಡಿ“ ಎಂದರು.
ನಿರ್ದೇಶಕ ಮಹೇಶ್ ಬಾಬು ಮಾತನಾಡಿ.. “ ಈ ಚಿತ್ರ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಸಿನಿಮಾ. ನನಗೆ ಅವಕಾಶ ಕೊಟ್ಟ ಇಡೀ ಚಿತ್ರತಂಡಕ್ಕೆ ಧನ್ಯವಾದ“ ಎಂದರು.
ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಾಣದಲ್ಲಿ ಚಿತ್ರ ತಯಾರಾಗಿದ್ದು, ಪ್ರಮುಖ ಪಾತ್ರಗಳಲ್ಲಿ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಅಭಿನಯಿಸಿದ್ದಾರೆ.ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ನೀಡಿದ್ದಾರೆ.