ಕಿಚ್ಚ ಸುದೀಪ್ ಮಾರ್ಕ್ ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ “ಮಾರ್ಕ್” ಚಿತ್ರವು ಡಿಸೆಂಬರ್ 25ರಂದು ಕನ್ನಡ ಸೇರಿದಂತೆ ಏಕಕಲಾದಲ್ಲಿ ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಇದೀಗ ಮಾರ್ಕ್ ಚಿತ್ರವು ಏರ್‌ಟೆಲ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ.
ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್, ಮೊದಲ ಬಾರಿಗೆ ಕನ್ನಡ ಚಿತ್ರದ ಜೊತೆ ಅಧಿಕೃತವಾಗಿ ಕೈಜೋಡಿಸಿದ್ದು, ಅಭಿನಯ ಚಕ್ರವರ್ತಿ ನಟನೆಯ ಈ ವರ್ಷದ ಬಹುನಿರೀಕ್ಷಿತ ಚಿತ್ರದ ಜೊತೆ ಒಪ್ಪಂದ ಮಾಡಿಕೊಂಡಿದೆ.
ಏರ್‌ಟೆಲ್ ಗ್ರಾಹಕರಿಗೆ ವಿಶೇಷ ಆಫರ್‌ಗಳು:
ಮಾರ್ಕ್ ಸಂಭ್ರಮವನ್ನು ಆಚರಿಸಲು ಏರ್‌ಟೆಲ್ “ಮಾರ್ಕ್ ಎಕ್ಸ್‌ಕ್ಲೂಸಿವ್ ಪ್ಯಾಕ್” ಅನ್ನು ಪರಿಚಯಿಸಿದೆ..
*ಇದರಲ್ಲಿ ಗ್ರಾಹಕರು ಹೊಸದಾಗಿ ಬಿಡುಗಡೆಯಾದ ‘9 ಸೀರೀಸ್’ (9 series) ನಂಬರ್‌ಗಳಿರುವ ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು.
*ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ ‘ಮಾರ್ಕ್’ ಚಿತ್ರದ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ನೀಡಲಾಗುವುದು.
ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು.

ಕಿಚ್ಚ ಸುದೀಪ್ ಮತ್ತು ವಿಜಯ್ ಕಾರ್ತಿಕೇಯನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ “ಮ್ಯಾಕ್ಸ್” ಚಿತ್ರವು ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಇದೇ ಕಾಂಬಿನೇಷನ್ ನಲ್ಲಿ ತಯಾರಾಗಿರುವ “ಮಾರ್ಕ್” ಚಿತ್ರವು ಈಗಾಗಲೇ ಟೀಸರ್ ಮತ್ತು ಸಾಂಗ್‌ಗಳಿಂದ ಸದ್ದು ಮಾಡುತ್ತಿದ್ದು. ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಸತ್ಯಜ್ಯೋತಿ ಫಿಲ್ಮ್ ಮತ್ತು ಕಿಚ್ಚ ಕ್ರಿಯೇಷನ್ಸ್ ಒಟ್ಟಿಗೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ.