ಮರಳಿ ಮನಸಾಗಿದೆ ಚಿತ್ರಕ್ಕೆ ಸಾಥ್ ನೀಡಿದ ನಟಿ ಪ್ರೇಮ

0
20250911_233518

ಮುದೆಗೌಡ್ರು ನವೀನ್ ಕುಮಾರ್ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಜಂಟಿಯಾಗಿ ನಿರ್ಮಾಣ ಮಾಡಿರುವ ಮರಳಿ ಮನಸಾಗಿದೆ ಚಿತ್ರದ (Marali Manasagide Movie) “ಓಡುವ ನದಿಯ” ಲಿರಿಕಲ್ ಹಾಡನ್ನು ನಟಿ ಪ್ರೇಮ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.


ಕೆ ಕಲ್ಯಾಣ್ ಬರೆದಿರುವ ಹಾಡಿಗೆ ಅನುರಾಧ ಭಟ್ ಧ್ವನಿಯಾಗಿದ್ದಾರೆ. ವಿನು ಮನಸು ಸಂಗೀತ ನೀಡಿರುವ ಈ ಹಾಡು  A2 MUSIC ಯು ಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದೆ.
ಭಜರಂಗಿ ಮೋಹನ್ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಬೆನಕ ಟಾಕೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ನಾಗರಾಜ್ ಶಂಕರ್ ನಿರ್ದೇಶನವಿದ್ದು, ನಾಯಕನಾಗಿ ಅರ್ಜುನ್ ವೇದಾಂತ್, ನಾಯಕಿಯರಾಗಿ ನೀರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ಅಭಿನಯಿಸಿದ್ದಾರೆ.

Share

Leave a Reply

Your email address will not be published. Required fields are marked *