ರೈತನಿಂದ ಸೈನಿಕನವರೆಗೆ ಸಾಗುವ ಕಥೆ…
ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರೀಶ್ ಎಸ್.ಎಂ. ನಿರ್ಮಾಣ ಮಾಡುತ್ತಿರುವ “ಮಹಾಕಾಳಿ ಪುತ್ರ” ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು.
ಮೂಲತ: ರೈತನಾಗಿರುವ “ಗಿರೀಶ್ ಎಸ್ ಎಂ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ಚಿತ್ರದ ನಾಯಕನಾಗಿ ಬಣ್ಣಹಚ್ಚುತ್ತಿದ್ದು, ರೈತನ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ರೈತರ ಬಗ್ಗೆ ಈವರೆಗೆ ಬಂದ ಎಲ್ಲಾ ಸಿನಿಮಾಗಳಿಗಿಂತ ಇದರಲ್ಲಿ ಬೇರೆಯದೇ ಕಥೆ ಇರುತ್ತದೆ. ಮಹಾಕಾಳಿಪುತ್ರ ಎಂದರೆ ದೈವರ ಆರಾಧಕ, ರೈತರು ಪ್ರತಿದಿನ ದೇವಿಯ ಪೂಜೆ ಮಾಡಿಕೊಂಡೇ ತಮ್ಮ ಕಾಯಕಕ್ಕೆ ಹೊರಡುತ್ತಿದ್ದರು. ಆ ರೈತನನ್ನು ದೇವಿ ಪುತ್ರ ಅಂತ ಚಿತ್ರದಲ್ಲಿ ತೋರಿಸ್ತಿದ್ದೇವೆ”. ಎಂದು ಹೇಳುತ್ತ.
“ಹಿಂದಿನ ಕಾಲದಲ್ಲಿ ರೈತರು ಪ್ರಾಮಾಣಿಕವಾಗಿ ನಿಯತ್ತಿಂದ ದುಡಿದು ಇಡೀ ದೇಶಕ್ಕೆ ಅನ್ನ ಹಾಕ್ತಿದ್ದರು. ಇವತ್ತು ಆ ರೈತನಿಗೆ ಸಮಾಜದಿಂದ ಸಿಗಬೇಕಾದ ಗೌರವ, ಬೆಲೆ ಸಿಗ್ತಿಲ್ಲ. ಮಣ್ಣನ್ನು ನಂಬಿ ದುಡಿಯುವ ರೈತನಿಂದ ಹಿಡಿದು ದೇಶ ಕಾಯೋ ಸೈನಿಕನಿಗೆ ಲಿಂಕ್ ಕೊಟ್ಟು ಈ ಕಾನ್ಸೆಪ್ಟ್ ಮಾಡಿದ್ದೇವೆ. ಆರಂಭದಿಂದ ಕೊನೆವರಿಗೂ ಸಿನಿಮಾ ಹೊಸದಾಗಿ ಕಾಣಬೇಕು ಅಂತ ಪ್ರಯತ್ನಿಸುತ್ತಿದ್ದೇವೆ. ಹಾಗೂ ಇದೇ ತಿಂಗಳ 15ರಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭಿಸುತ್ತಿದ್ದೇವೆ, ಇದು ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ಬೇರೆ, ಬೇರೆ ಭಾಷೆಯ ಕಲಾವಿದರೂ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ“ ಎಂದು ಗಿರೀಶ್ ಎಸ್ ಎಂ ಹೇಳಿದರು.
ಇನ್ನೂ ಮಹಾಕಾಳಿ ಪುತ್ರ ಚಿತ್ರಕಥೆ ಬರೆದಿರುವ ಗಿರೀಶ್ ಗೌಡ ಮಾತನಾಡಿ “ಗಿರೀಶ್ ನನ್ನ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದ, ನಾನೀಗ ಮದ್ದೂರ್ ವಡೆ ಸಿನಿಮಾ ಮಾಡ್ತಿದ್ದೇನೆ. ಇದು ನಮ್ಮ ಮಣ್ಣಿನ ಕಥೆ. ಇದೇ ಮಣ್ಣು ಹೇಗೆ ಆರ್ಮಿಗೆ ಸೇರುತ್ತೆ, ನಮ್ಮ ಮಣ್ಣಿಂದ ಗನ್ ಪೌಡರ್ ಕೂಡ ಮಾಡಬಹುದು. ಅದರ ಮೈನಿಂಗ್ ನ ಸಣ್ಣ ಬೇಸ್ ಇಟ್ಕೊಂಡು ಈ ಸಿನಿಮಾ ಮಾಡ್ತಿರೋದು. ನಮ್ಮಮಣ್ಣಿನ ಬೆಲೆ ಏನು ಅಂತ ತೋರಿಸ್ತಿದ್ದೇವೆ. ಶಿವಮೊಗ್ಗದಲ್ಲಿ ನಡೆಯುವ ಜಾತ್ರೆಯನ್ನು ರಿಯಲ್ ಆಗಿ ಶೂಟ್ ಮಾಡ್ತಿದ್ದೇವೆ“. ಎಂದು ಹೇಳಿದರು.

ಮಂಡ್ಯ, ಮದ್ದೂರು ಸುತ್ತಮುತ್ತ ಸ್ಥಳಗಳಲ್ಲಿ ನಡೆಯು ಕಥೆ ಇದಾಗಿದ್ದು. ರಾಜನಿವಾಸ, ಪ್ಯಾರ್ ಚಿತ್ರದಲ್ಲಿ ಕೆಲಸ ಮಾಡಿದ ವೆಂಕಟೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ಒಂದೇ ಹಾಡಿದ್ದು, ರಾಹುಲ್ ವಸ್ತಾರ ಮ್ಯೂಸಿಕ್ ಮಾಡ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಾಹಣ ಚಿತ್ರಕ್ಕಿದೆ.