25ನೇ ದಿನದತ್ತ “ಮಗ್ಗಿಪುಸ್ತಕ”
ಕಳೆದ ತಿಂಗಳು ರಿಲೀಸ್ ಆಗಿದ ಯುವ ನಿರ್ದೇಶಕ ಹರಿವರಾಸನಂ ನಿರ್ದೇಶನದ ಮೊದಲ ಚಿತ್ರ “ಮಗ್ಗಿಪುಸ್ತಕ” ಹತ್ತಕ್ಕೂ ಹೆಚ್ಚು ಸೆಂಟರ್ಗಳಲ್ಲಿ 25ನೇ ದಿನ ಪೊರೈಸಿದೆ. ಯುವಕರು ಮತ್ತು ಮಹಿಳಾ ಪ್ರೇಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಕೂಡ ಚಿತ್ರವನ್ನು ವೀಕ್ಷಿಸುತ್ತಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ಶಿವಮೊಗ್ಗ ಭಾಗದಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ.
ಕನಕಪುರ, ಉತ್ತರ ಕರ್ನಾಟಕದಲ್ಲೂ ಈ ವಾರದಿಂದ 25ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ಮಗ್ಗಿಪುಸ್ತಕದಲ್ಲಿ .ಸರ್ಕಾರಿ ಹಿರಿಯ ಪಾಠಶಾಲೆ ಖ್ಯಾತಿಯ ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅವನಿ ಎಂಬ ಕಾದಂಬರಿಯನ್ನು ಆಧರಿಸಿ ಮಾಡಿದ ಚಿತ್ರ ಇದಾಗಿದ್ದು, ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಚಿತ್ರ. ಜೀವನದ ಲೆಕ್ಕಾಚಾರ ಇದರಲ್ಲಿದೆ.

ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಎತಿರಾಜ್ ಸ್ನೇಹಿತರ ಜತೆಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್ ಮಾಡಿದ್ದರು.
ಚಿತ್ರದಲ್ಲಿ ಒಟ್ಟಿ 7 ಹಾಡುಗಳಿದ್ದು ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ. ಡಾ. ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ, ಜಮೀನ್ರ್ರು ಚಿತ್ರಗಳಿಗೆ ಸಂಗೀತ ನೀಡಿದ್ದ ಎಂ.ಎ.ಕೀರವಾಣಿ ಬಹಳ ದಿನಗಳ ನಂತರ ಈ ಚಿತ್ರದ ಹಾಡೊಂದಕ್ಕೆ ದನಿಯಾಗಿರುವುದು ವಿಶೇಷ.