“ಕಿಂಗ್” ಚಿತ್ರದ ಶೀರ್ಷಿಕೆ ಬಿಡುಗಡೆ

0
20260217_174254.jpg

ಜಾಕ್ ನಿರ್ದೇಶನದ ಮೊದಲ ಚಿತ್ರ ಹಾಗೂ ಲೂಸ್ ಮಾದ ಯೋಗಿ ನಟನೆಯ 50ನೇ ಚಿತ್ರವಾದ “ಕಿಂಗ್” ಶೀರ್ಷಿಕೆಯನ್ನು ನಟ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದರು. ಚಿತ್ರಕ್ಕೆ ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್ ಮತ್ತು ಸ್ನೇಹಿತರು ನಿರ್ಮಾಣ ಹೂಡುತ್ತಿದ್ದಾರೆ.

ಕಿಂಗ್ ಚಿತ್ರದಲ್ಲಿ ರಕ್ತ ಸಿಕ್ತ ಅಧ್ಯಾಯ ಮಾತ್ರ ಅಲ್ಲ ಎಮೋಷನ್ ಕೂಡ ಇದೆ. ಯೋಗಿಯ ನಂದ ಲವ್ಸ್ ನಂದಿತಾ ಚಿತ್ರ ಕೂಡ ಯಶಸ್ಸು ಕಂಡಿತ್ತು, ಹೀಗಾಗಿ ಕಪಾಲಿ ಚಿತ್ರಮಂದಿರದ ಮೇಲೆ ವಿಶೇಷ ಅಭಿಮಾನವಿದೆ. ನಟ ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ.ಅಪ್ಪು ಜೊತೆ ಹುಡುಗರು ಚಿತ್ರದಲ್ಲಿ ನಟಿಸಿದ್ದರು,
ಜೊತೆಗೆ ನನ್ನ ಜೊತೆಯೂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉತ್ತಮ ನಟ, ಎಂದು ಹೇಳುತ್ತ ಚಿತ್ರಕ್ಕೆ ಶುಭಹಾರೈಸಿದ್ದರು ಶಿವಣ್ಣ

ನಟ ಯೋಗೇಶ್ ಮಾತನಾಡಿಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಮತ್ತೊಂದು ಲೆಕ್ಕ. ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದೇನೆ. ಕಿಂಗ್ ವೃತ್ತಿ ಜೀವನದ 50ನೇ ಚಿತ್ರ, ಸಿನಿಮಾದಲ್ಲಿ ಬೇರೆ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ನೀಡುತ್ತೇವೆ. ಟೀಸ???ನಲ್ಲಿ ಮೂಡಿ ಬರುವ ಟೇಕ್ ಅನ್ನು 5 ಬಾರಿ ತೆಗೆದುಕೊಂಡಿದ್ದೇನೆ ಎಂದರು.

ನಿರ್ದೇಶಕ ಜಾಕ್ ಮಾತನಾಡಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಮಾಡಲಾಗುತ್ತಿದೆ, ಚಿತ್ರದಲ್ಲಿ ಬಾಲಿವುಡ್ ಸೇರಿದಂತೆ ತೆಲುಗು,ತಮಿಳು ಮತ್ತು ಮಲೆಯಾಳಂ ಭಾಷೆಯ ಕಲಾವಿದರು ಚಿತ್ರದಲ್ಲಿದ್ದಾರೆ. ಕಥೆ ಮಾಡಿಕೊಳ್ಳುವಾಗಲೇ ನಟ ಯೋಗಿ ನಟಿಸಿದ್ದರೆ ಚೆನ್ನ ಎಂದು ಹೇಳಿ ಅವರಿಗೆ ಕಥೆ ಹೇಳಿ ಸಿನಿಮಾ ಮಾಡುತ್ತಿದ್ದೇನೆ ದೊಡ್ಡ ಬಜೆಟ್ ಸಿನಿಮಾ, ಕನ್ನಡ, ತಮಿಳು ನೇಟೀವಿಟಿ ಅನ್ನುವುದಕ್ಕಿಂತ ಇಂಡಿಯನ್ ಸಿನಿಮಾ ಮಾಡುತ್ತೇವೆ.

ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇದ್ದು, ಆಕ್ಷನ್ ಅಷ್ಟೇ ಅಲ್ಲ ಕಣ್ಣೀರಿನ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ, ಅದನ್ನು ಟೀಸ???ನಲ್ಲಿ ತೋರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕಲಾವಿದರು ಸೇರಿದಂತೆ ಚಿತ್ರದ ಬೇರೆ ಮಾಹಿತಿ ನೀಡಲಾಗುವುದುಎಂದರು.

ಕಣ್ಣೀರಿನ ಕಥೆಯನ್ನು ಕಿಂಗ್ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಸದ್ಯಕ್ಕೆ ಮೂರು ಹಾಡುಗಳು ಇವೆ ಎಂದರು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ.

ನಿರ್ಮಾಪಕರಾದ ಸಂತೋಷ್ ಬಸವರಾಜ್ , ಮಲ್ಲಿಕಾರ್ಜುನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು, ಈ ವೇಳೆ ಹಿರಿಯ ನಿರ್ಮಾಪಕ ಟಿಪಿ ಸಿದ್ದರಾಜ್, ಭಾಮ ಹರೀಶ್, ಕೃಷ್ಣೇಗೌಡ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.

Share

Leave a Reply

Your email address will not be published. Required fields are marked *