ಪೀಕಬೂಗೆ ನಾಯಕ ‘ಶ್ರೀರಾಮ್’
ಶ್ರೀ ಕೆಂಚಾಂಬ ಸಿನಿಮಾ ಬ್ಯಾನರ್ ಗಣೇಶ್ ಕೆಂಚಾಂಬ ನಿರ್ಮಾಣ ಮಾಡುತ್ತಿರುವ ಪೀಕಬೂ ಚಿತ್ರದ ಮೂಲಕ ನಟಿ ಅಮ್ಯೂಲ್ಯ ಅವರು ಸುದೀರ್ಘ ಗ್ಯಾಪ್ ನಂತರ ನಟನೆಗೆ ಮರಳುತ್ತಿದ್ದಾರೆ. ಅಮೂಲ್ಯ ಟೀಸರ ಮೂಲಕ ಸದ್ದು ಮಾಡಿದ ಚಿತ್ರ ತಂಡ, ನಾಯಕನ ಬಗ್ಗೆ ಯಾವುದೇ ಸುಳಿವು ಕೊಟ್ಟರಲಿಲ್ಲ.
ಇದೀಗ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ನಾಯಕನ ಪರಿಚಯದ ಟೀಸರ್ ಬಿಡುಗಡೆ ಮಾಡಿದೆ ಚಿತ್ರತಂಡ, ಅಮೂಲ್ಯಗೆ ಜೋಡಿಯಾಗಿ ಶ್ರೀರಾಮ್ ನಟಿಸುತ್ತಿದ್ದಾರೆ.
ಹೌದು ಶ್ರೀರಾಮ್ ಈ ಹಿಂದೆ ಇರುವುದೆಲ್ಲವ ಬಿಟ್ಟು, ಗಜಾನನಾ ಅಂಡ್ ಗ್ಯಾಂಗ್, ಹೊಂದಿಸಿಬರೆಯಿರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಶ್ರೀ ಮಾದೇವ್ , ಪೀಕಬೂ ಮೂಲಕ ಶ್ರೀರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ.

ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನ ಮಾಡಿತ್ತಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಚಿತ್ರೀಕರಣ ಈಗಾಗಲೇ 60% ಮುಗಿದಿದೆ. ಸುರೇಶ್ ಬಾಬು ಛಾಯಾಗ್ರಹಣ, ವೀರ್ ಸಮರ್ಥ್ ಶ್ರೀಧರ್ ಕಶ್ಯಪ್ ಸಂಗೀತ , ಎನ್.ಎಂ ವಿಶ್ವ ಸಂಕಲನ ಈ ಚಿತ್ರಕ್ಕಿದೆ.