ರುಧಿರ್ವನ IFFI ಗಾಲಾ ಪ್ರೀಮಿಯರ್‌ಗೆ ಆಯ್ಕೆ
ಪಾಯಿಂಟ್ ಆಫ್ ವೀವ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಕನ್ನಡಿಗ ಅಗ್ನಿ ನಿರ್ದೇಶನದ ಮೊದಲ ಚಿತ್ರವಾದ “ರುಧಿರ್ವನ” ಚಿತ್ರವು ಗೋವಾದಲ್ಲಿ ನಡೆಯುತ್ತಿರುವ IFFI ಗಾಲಾ ಪ್ರೀಮಿಯರ್‌ಗೆ ಆಯ್ಕೆಯಾಗಿದೆ.
ಸೋಮವಾರ ಚಿತ್ರ ಪ್ರದರ್ಶನ ಆಗುತ್ತಿದ್ದು, ಈಗಾಗಲೇ ಹೌಸ್‌ಪುಲ್ ಆಗಿರುವುದರಿಂದ ಚಿತ್ರತಂಡ ಸಂತಸದಲ್ಲಿದೆ.
ರುಧಿರ್ವನ ಅಂದ್ರೆ ರಕ್ತಸಿಕ್ತವಾದ ಕಾಡು ಎಂದರ್ಥ. ಹಾರರ್ ಜಾನರ್‌ನಲ್ಲಿರುವ ಈ ಚಿತ್ರವು ಪ್ರೇಕ್ಷಕರು ಸೀಟಿನ ತುದಿಗೆ ಕುರಿಸುವ ಕಂಟೆಂಟ್ ಇದೆ ಎಂಬುದು ಚಿತ್ರತಂಡದ ಮಾತು.
ಇನ್ನೂ ಈ ಚಿತ್ರದಲ್ಲಿ ಪವನಾಗೌಡ, ಭೀಮ ಖ್ಯಾತಿಯ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ. ದಿನಿ ಕೆಳಮನೆ, ಅವಿನಾಶ್ ರೈ, ಅರ್ಜುನ್ ಕಜೆ, ಅಪೂರ್ವ ನಟಿಸಿದ್ದಾರೆ.