‘ದಿ ಟಾಸ್ಕ್’ಗೆ ಧ್ರುವ ಸರ್ಜಾ ಸಾಥ್

0
20251105_090345

ರಾಘು ಶಿವಮೊಗ್ಗ ಆ್ಯಕ್ಷನ್ ಕಟ್ ಹೇಳಿರುವ ಮೂರನೇ ಚಿತ್ರ “ದಿ ಟಾಸ್ಕ್” ನವೆಂಬರ್ 21ಕ್ಕೆ ತೆರೆಕಾಣುತ್ತಿದೆ. ಕಳೆದ ತಿಂಗಳು ಬಿಡುಗಡೆ ಆದ ಟೀಸರ್ ಚಿತ್ರದ ಮೇಲೆ ಕುತೂಹಲ ಮೂಡಿಸಿತು. ಇದೀಗ ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ “ಚಿತ್ರದ ಸಾಗುವ ದಾರಿಯ ತುಂಬಾ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದರು.

ಭೀಮ ಚಿತ್ರದಲ್ಲಿ ಎಂ ಎಲ್ ಎ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ ಜಯ ಸೂರ್ಯ ಆರ್ ಅಜಾದ್ ಹಾಗೂ ಪೆಂಟಗನ್ ಸಿನಿಮಾ ಖ್ಯಾತಿಯ ಸಾಗರ್ ರಾಮ್ ನಾಯಕರಾದರೆ. ಪ್ರಧಾನ ಪಾತ್ರದಲ್ಲಿ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ ಸ್ಯಾಂಡಿ ಸರ್ ಯೂನಿಕ್ ಆಗಿ ಮ್ಯೂಸಿಕ್ ಕೊಟ್ಟಿದ್ದಾರೆ. ಈ ಸಾಂಗ್ ಎಲ್ಲರಿಗೂ ಈ ಹಾಡು ಇಷ್ಟವಾಗುತ್ತದೆ. ಟೀಸರ್ ನೋಡಿದ್ರೆ ಆಕ್ಷನ್ ಥ್ರಿಲ್ಲರ್ ಎನಿಸುತ್ತದೆ. ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟುತ್ತದೆ. ನಾವು ನಮ್ಮ ಸ್ನೇಹಿತರ ಜೊತೆ ಫಸ್ಟ್ ಡೇ ಫಸ್ಟ್ ಶೋ ಹೋಗಿ ನಿಮಗೆ ಕಾಲ್ ಮಾಡ್ತೀವಿ. ಈ ಚಿತ್ರದಿಂದ ಇಬ್ಬರು ಹೊಸ ಹೀರೋಗಳು ಲಾಂಚ್ ಆಗುತ್ತಿದ್ದಾರೆ. ಇಬ್ಬರೂ ನಾಯಕರಿಗೂ ಆಲ್ ದ ಬೆಸ್ಟ್ ಎಂದರು.

ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಿರುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಉಳಿದಂತೆ ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್ ಕಾಣಿಸಿಕೊಂಡಿದ್ದಾರೆ.

ಹೇಗಿದೆ ಹಾಡು?
ಸಾಗುವ ದಾರಿಯ ತುಂಬಾ… ಮೋಟಿವೇಶನ್ ಸಾಂಗ್ ಆಗಿದ್ದು, ಸಾಹಿತ್ಯಕ್ಕೆ ಸಂಗೀತವು ಪೂರಕವಾಗಿದೆ. ಡಾ. ವಿ ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ರಾಘು ಶಿವಮೊಗ್ಗ ಹಾಗೂ ಚೇತನ್ ನಾಯಕ್ ಹಾಡಿದರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದರೆ.

Share

Leave a Reply

Your email address will not be published. Required fields are marked *