ಮೈ ನೇಮ್ ಇಸ್ ಕೆ ಡಿ ಚಿತ್ರದ ಟ್ರೇಲರ್ ಬಿಡುಗಡೆ
ಈ ಹಿಂದೆ ಇಂತಿ ನಿಮ್ಮ ಬೈರಾ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಆರ್ಯನ್ ವೆಂಕಟೇಶ್ ಅವರು ಇದೀಗ “ಮೈ ನೇಮ್ ಇಸ್ ಕೆಡಿ” ಎಂದು ಬರಲು ಸಿದ್ದರಾಗಿದ್ದಾರೆ. ಆರ್ಯನ್ ವೆಂಕಟೇಶ್ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ಮಾಣದ ಹೊಣೆಯನ್ನು ಒತ್ತಿದ್ದು, ಕೆ ಜೆ ಚಿಕ್ಕು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಬಾ ಮ ಹರೀಶ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದ್ದರು. ಕಾರ್ಯಕ್ರಮಕ್ಕೆ ಮಹಾರಾಣಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಶಿವಶಂಕ್ರಪ್ಪ ಹಾಗೂ ಚಲನ ಚಿತ್ರ ನಿರ್ದೇಶಕರಾದ ಟಿ ಸಿ ವೆಂಕಟೇಶ್ ಆಗಮಿಸಿದರು.
ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಕೆ ಜೆ ಚಿಕ್ಕು ಅವರು ಇಂತಿ ನಿಮ್ಮ ಬೈರಾ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶರಾಗಿದ್ದು, ಇದು ಇವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಕೆ.ಡಿ ಎಂದರೇ..? “ಕನಕನಹಳ್ಳಿ ದಾಸೇಗೌಡರ ಮಗ ಎಂಬುದನ್ನು ಶಾರ್ಟ್ ಆಗಿ “ಮೈ ನೇಮ್ ಇಸ್ ಕೆಡಿ” ಎಂದು ಹೆಸರಿಡಲಾಗಿದೆ.
“ಬಡಕುಟುಂಬದಲ್ಲಿ ಹುಟ್ಟಿದ ಹುಡುಗ ಶಾಸಕನ ಬಳಿ ಸಹಾಯ ಕೇಳಲು ಹೋದಾಗ, ಆ ಶಾಸಕ ಹುಡುಗನನ್ನು ಅವಮಾನಿಸುತ್ತಾನೆ ಆಗ ಸವಾಲನ್ನು ಹಾಕಿ, ಹಲವು ಸವಾಲುಗಳನ್ನು ಎದುರಿಸಿ ಹೇಗೆ ಆ ಹುಡುಗ ಎಂ ಎಲ್ ಎ ಆಗುತ್ತಾನೆ ಎಂಬುದು“ ಚಿತ್ರದ ಕಥೆ.
ಆರ್ಯನ್ ವೆಂಕಟೇಶ್ಗೆ ನಾಯಕಿಯಾಗಿ ಭವಾನಿ ಬಣ್ಣಹಚ್ಚಿದ್ದು, ಪ್ರಮುಖ ಪಾತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ, ಗಿರೀಶ್, ವಿಶ್ವ, ಅರಸು ನಟಿಸಿದ್ದಾರೆ. ಕನಕಪುರ, ಹೆಸರಘಟ್ಟ, ಅನೇಕಲ್ ಸುತ್ತಮುತ್ತ ಪ್ರದೇಶಗಳಲ್ಲಿ 30 ದಿನ ಚಿತ್ರದ ಚಿತ್ರೀಕರಣವಾಗಿದೆ.