ವಿರಾಟ್ ನಟನೆಯ ಹೊಸ ಚಿತ್ರದ ಟೈಟಲ್ ಲಾಂಚ್

0
WhatsApp Image 2025-10-26 at 12.48.51 PM

ವಿರಾಟ್ ಅಭಿನಯದ ಹೊಸ ಚಿತ್ರ "ಹರ್ಕ್ಯುಲಸ್"

ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ವಿರಾಟ್ ನಂತರ ರಾಯಲ್ ಚಿತ್ರದಲ್ಲಿ ನಟಿಸಿದರು. ವಿರಾಟ್ ನಟನೆಯ ಹೊಸ ಚಿತ್ರದ ಶೀರ್ಷಿಕೆಯನ್ನು ನಗರದ ಪ್ರತಿಷ್ಠಿತ ಮಾಲ್‌ನ ಆವರಣದಲ್ಲಿ ಮಾಡಲಾಯಿತು.
ವಿರಾಟ್ ನಾಯಕನಾಗಿ ಅಭಿನಯದ ಹೊಸ ಚಿತ್ರಕ್ಕೆ “ಹರ್ಕ್ಯುಲಸ್” ಎಂದು ಹೆಸರಿಡಲಾಗಿದ್ದು, ಅಹಾನ ಫಿಲಂಸ್ ಚಿತ್ರವನ್ನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಈಗಾಗಲೇ Chat GPT ಸಂಸ್ಥೆಯ ಸಹಯೋಗದೊಂದಿಗೆ ಬಾಲಿವುಡ್‌ನ ಹಲವು ಸಿನಿಮಾಗಳು ಹೊರ ಬಂದಿದೆ,ಮೊದಲ ಬಾರಿಗೆ ಕನ್ನಡದ ಹರ್ಕ್ಯುಲಸ್ ಚಿತ್ರದ ಜೊತೆ Chat GPT ಸಂಸ್ಥೆಯು ಕೊಲಾಬರೇಷನ್ ಆಗಿರುವುದು ವಿಶೇಷ.

ಹಲವು ವರ್ಷಗಳಿಂದ ಕನ್ನಡದ ಅನೇಕ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಯುವ ನಿರ್ದೇಶಕ ಭಗೀರಥ ಹರ್ಕ್ಯುಲಸ್ ಚಿತ್ರಕ್ಕೆ ಕಥೆ- ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಜೀವನದಲ್ಲಿ ಸೋಲನ್ನೇ ಕಾಣದೇ ಇರುವ ಯುವಕನ ಕಥೆ. ಆಕ್ಷನ್ ಹಾಗೂ ಲವ್ ಕಂಟೆಂಟ್ ಇರುವ ಈ ಚಿತ್ರದಲ್ಲಿ “ವಿರಾಟ್” ಅವರನ್ನು ವಿಭಿನ್ನವಾಗಿ ತೆರೆಮೇಲೆ ತೋರಿಸಬೇಕೆಂದು ಪ್ರಯತ್ನಿಸುತ್ತಿದ್ದೇವೆ. ಚಿತ್ರದ ನಾಯಕಿ ಕನ್ನಡದವರೇ ಆಗಿದ್ದು ಸದ್ಯದಲೇ ತಿಳಿಸುತ್ತೇವೇ ಎನ್ನುತ್ತ ಚಿತ್ರದ ಚಿತ್ರೀಕರಣ ನವೆಂಬರ್‌ನಲ್ಲಿ ಪ್ರಾರಂಭಿಸಿ, ಮಾರ್ಚ್-ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ” ಎಂದು ನಿರ್ದೇಶಕ ಭಗೀರಥ ಹೇಳಿದ್ದರು.

ಚಿತ್ರದಲ್ಲಿ ನನಗೆ ಮೂರು ಶೇಡ್‌ಗಳಿವೆ, ಈ ಚಿತ್ರದಲ್ಲಿನ ಪಾತ್ರಗಳಿಗೆ ಬಹಳಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದೇನೆ ಹಾಗೂ ನಿರ್ದೇಶಕರು ಪ್ರತಿ ಸನ್ನಿವೇಶಗಳನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ಎಂದು ನಾಯಕ ವಿರಾಟ್ ಹೇಳಿದರು.

ಚಿತ್ರಕ್ಕೆ ಹರಿಕೃಷ್ಣ ಅವರ ಮಗ ಆದಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಈ ಹಿಂದೆ ಸಂಗೀತ ಕಿಸ್ ಚಿತ್ರದ ಒಂದು ಹಾಡಿಗೆ ಕಂಪೋಸ್ ಮಾಡಿದ್ದಾರು. ಇನ್ನೂ ಕರುಣಾಕರ್ ಛಾಯಾಗ್ರಾಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ.

Share

Leave a Reply

Your email address will not be published. Required fields are marked *