ಸೋಲ್‌ಮೇಟ್ಸ್ ಇದೇ ಶುಕ್ರವಾರ ಬಿಡುಗಡೆ

0
20250914_151823

ಪಿ ವಿ ಶಂಕರ್ ನಿರ್ಮಿಸಿ, ಮೊದಲ ಬಾರಿಗೆ ನಿರ್ಮಾಣ ಮಾಡಿರುವ “ಸೋಲ್‌ಮೇಟ್ಸ್” ಚಿತ್ರಕ್ಕೆ ಪರಿಸರ ಪ್ರೇಮಿ ಎಂಬ ಅಡಿಬರಹವಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಸೆಪ್ಟೆಂಬರ್ 19 ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಜಿ.ಆರ್. ಅರ್ಚನಾ ಹಾಗೂ ಶಂಕರ್ ಪಿ.ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರು ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ.

ಚಿತ್ರದ ನಾಯಕರಾಗಿ ರಂಗ್ ಬಿ ರಂಗ್ ಚಿತ್ರದಲ್ಲಿ ನಟಿಸಿದ ಶ್ರೀಜಿತ್ ಸೂರ್ಯ ಹಾಗೂ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ ಹಾಗೂ ನಾಯಕಿಯರಾಗಿ ಯಶ್ವಿಕಾ ನಿಷ್ಕಲ, ರಜನಿ ನಟಿಸಿದ್ದಾರೆ. ಇನ್ನೂ ಪ್ರಮುಖ ಪಾತ್ರಗಳಲ್ಲಿ ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್ ಅಭಿನಯಿಸಿದ್ದಾರೆ.

ಚಿಕ್ಕ ವಯಸ್ಸಿನಿಂದಲ್ಲೂ ಸಿನಿಮಾ ಅಂದರೆ ತುಂಬಾ ಇಷ್ಟ, ಈ ಕ್ಷೇತ್ರದಲ್ಲೆ ಸಾಧಿಸ ಬೇಕೆಂದು ಸಿನಿಮಾ ರಂಗಕ್ಕೆ ಬಂದು ಈ ಚಿತ್ರ ಮಾಡಿದ್ದೇನೆ, ಚಿತ್ರದ ಬಗ್ಗೆ ಹೇಳುವುದಾದರೆ ಒಂದು ಹುಡುಗ ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಮಾಜವನ್ನು ಹೇಗೆಲ್ಲ ಎದುರಿಸುತ್ತಾರೆ ಎಂಬುದು ಚಿತ್ರದ ಒಂದು ಲೈನ್ ಸ್ಟೋರಿ ಹಾಗೂ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದ ಹಾಡೊಂದರ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿದೆ.

ನಾಯಕ ಶ್ರೀಜಿತ್ ಶೆಟ್ಟಿ ಪಾತ್ರದ ಹೆಸರು “ಸತ್ಯ” ಹೆಸರಿಗೆ ತಕ್ಕಂತೆ ಸತ್ಯವನ್ನು ಹೇಳುವ ಪಾತ್ರದಲ್ಲಿ ನಟಿಸಿದರಂತೆ,
ಮತ್ತೊಬ್ಬ ನಾಯಕನಾದ ಪ್ರಸನ್ನ ಶೆಟ್ಟಿ ಮುಗ್ದ ಹಳ್ಳಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ನಾಯಕಿ ಯಶ್ವಿಕಾ ನಿಷ್ಕಲ ಮೃದು ಹುಡಿಗಿಯ ಪಾತ್ರದಲ್ಲಿ ಕ್ಯೂಟಿ ಆಗಿ ಚಿತ್ರದಲ್ಲಿ ಅಭಿನಯಿಸಿದರೆ. ನಟ ಯಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರವಾದ “ಸುಪಾರಿ ಕಿಲ್ಲರ್” ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ.

ಚಿತ್ರಕ್ಕೆ ಕೃಷ್ಣ ಸುದರ್ಶನ್ ಛಾಯಗ್ರಹಣ, ಪವನ್ ರಮಿ ಶೆಟ್ಟಿ ಸಂಕಲನ ಚಿತ್ರಕ್ಕಿದೆ.

Movie Trailer 👇🏼

Share

Leave a Reply

Your email address will not be published. Required fields are marked *