ಆಸ್ಕರ್ ಕೃಷ್ಣ ನಿರ್ದೇಶನದ 8ನೇ ಚಿತ್ರ

0
WhatsApp Image 2025-08-03 at 10.31.04 AM

ಆಸ್ಕರ್ ಕೃಷ್ಣ ನಿರ್ದೇಶನದ ಹೊಸ ಚಿತ್ರ

ಸ್ಯಾಂಡಲ್‌ವುಡ್‌ನಲ್ಲಿ ಕಳೆದ 14 ವರ್ಷದಿಂದ ನಿರ್ದೇಶನ ಮತ್ತು ನಟನೆ ಎರಡರಲ್ಲೂ ತೊಡಗಿಸಿಕೊಂಡಿರುವ ಆಸ್ಕರ್ ಕೃಷ್ಣ ಅವರು ಇದೀಗ ಅವರ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಇದೇ ಆಗಸ್ಟ್ 5ರಂದು ಅನಾವರಣವಾಗಲಿದೆ.

ಕೃಷ್ಣ ಅವರ ಮೊದಲ ಸಿನಿಮಾದ ಹೆಸರು “ಆಸ್ಕರ್” ಆಗಿದ್ದು,ಅಂದಿನಿಂದ ಇವರನ್ನು ಆಸ್ಕರ್ ಕೃಷ್ಣ ಎಂದು ಕರೆಯಲಾಗುತ್ತಿದೆ. ಆಸ್ಕರ್ ಕೃಷ್ಣ ಈ ವರ್ಷದ ಮೊದಲು “ದೊಡ್ಮನೆ ಸೊಸೆ” ಚಿತ್ರವನ್ನು ಪ್ರಾರಂಭಿಸಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಕಲಾಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಅವರು ತಮ್ಮ ಸ್ನೇಹಿತರು ಸೇರಿ ಹೊಸ ಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಆಸ್ಕರ್ ಕೃಷ್ಣ ನಿರ್ದೇಶನದ “8ನೇ ಚಿತ್ರ ಇದಾಗಿದ್ದು, ಎಂಟು ಜನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ ಜಾನರ್ ಇರುವ ಈ ಚಿತ್ರದಲ್ಲಿ ಪರಿಚಿತ ಕಲಾವಿದರು ನಟಿಸುತ್ತಿದ್ದಾರೆ” ಎಂದರು.

ಆಸ್ಕರ್ ಕೃಷ್ಣ
Share

Leave a Reply

Your email address will not be published. Required fields are marked *