ಡ್ಯಾನ್ಸ್ ಥೀಮ್ ಆಧಾರಿತ ಚಿತ್ರ ಜನರಿಂದ ನಾನು ಮೇಲೆ ಬಂದೆ
ಗಂಧರ್ವರಾಜ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ “ಜನರಿಂದ ನಾನು ಮೇಲೆ ಬಂದೆ” ಎಂಬ ವಿಭಿನ್ನ ಹೆಸರಿನಲ್ಲಿ ಚಿತ್ರ ಬರುತ್ತಿದೆ. ನವಿಲುಗರಿ ನವೀನ್ ಪಿ ಬಿ ನಿರ್ದೇಶನ ಮಾಡುವುದರ ಜೊತೆಗೆ ಎರಡನೇ ನಾಯಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ಆಪ್ತಿ ಪಟವರ್ಧನ್ ಹಾಗೂ ಕೃತಿಕಾ ದಿವಾಕರ್ ಬಣ್ಣಹಚ್ಚಿದ್ದಾರೆ.

ಲೆಟ್ಸ್ ಡ್ಯಾನ್ಸ್ ಎಂಬ ಅಡಿಬರ ಇರುವ ಈ ಚಿತ್ರದ ಕಥೆಯು ಡ್ಯಾನ್ಸ್ ಆಧಾರಿತವಾಗಿದ್ದು, “ಸ್ಲಂನಲ್ಲಿ ಜೀವನ ನಡೆಸುವ ಸಾಮಾನ್ಯ ಹುಡುಗ ನೃತ್ಯಗಾರ ಆಗಬೇಕೆಂದು ಹೇಗೆಲ್ಲ ಕಷ್ಟಪಡುತ್ತಾನೆ..?, ಇನ್ನೂಬ್ಬ ನಾಯಕ ಡ್ಯಾನ್ಸ್ ಮೇಲಿನ ಆಸಕ್ತಿಯಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಡ್ಯಾನ್ಸ್ನಲ್ಲಿ ಸಾಧನೆ ಮಾಡಲು ನಿರ್ಧರಿಸುತ್ತಾನೆ. ಈ ಇಬ್ಬರು ನಾಯಕರು ತಮ್ಮ ಗುರಿ ತಲುಪಲು ಏನೆಲ್ಲಾ ಮಾಡುತ್ತಾರೆ ಎಂಬುದು“ ಚಿತ್ರದ ಒಂದು ಲೈನ್ ಸ್ಟೋರಿ.

ಶ್ರೀಮತಿ ಬಿ ಹೇಮಾವತಿ ನಿರ್ಮಾಣದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವಣ್ಣ ಎಂ ನಟಿಸುತ್ತಿದ್ದಾರೆ. ಪ್ರಣವ್ ಸತೀಶ್ ಸಂಗೀತ, ಗೌತಮ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.



