Skip to content
Home » ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್

ರಾಯಚೂರು ಹುಡುಗರ ಹೊಸ ಆಲ್ಬಂ ರಿಲೀಸ್

ಇತ್ತೀಚಿಗೆ ಕನ್ನಡದಲ್ಲಿ ಆಲ್ಬಂ ಸಾಂಗ್‌ಗಳು ಹೆಚ್ಚಾಗಿ ಬರುತ್ತಿವೆ, ತಮ್ಮದೇ ಟೀಂ ಮಾಡಿಕೊಂಡು ಹುಡುಗರು ತಮ್ಮ ಪ್ರತಿಭೆಯನ್ನು ಆಲ್ಬಂ ಸಾಂಗ್ ಮೂಲಕ ಪ್ರತಿಭೆ ತೋರಿಸುತ್ತಾರೆ. ಪ್ರವೀಣ್ ರಾಯಚೂರು ಎಂಬ ಯುವ ಪ್ರತಿಭೆ ತಮ್ಮ ಗೆಳೆಯರೆನೆಲ್ಲ ಸೇರಿಸಿಕೊಂಡು ರಾಮ್ ಸೀತ ಆಲ್ಬಂ ಸಾಂಗ್ ನ್ನು ಮಾಡಿದ್ದಾರೆ.

ಮೂಲತ: ರಾಯಚೂರಿನವರಾದ ಪ್ರವೀಣ್ ರಾಯಚೂರಿನ ಸೇವಾ ಕಾಲೇಜಿನಲ್ಲಿ ಬಿ.ಕಾಂ ಮಾಡಿದ್ದಾರೆ, ಮ್ಯೂಸಿಕ್ ಮೇಲೆನ ಆಸಕ್ತಿಯಿಂದ ಸಂಗೀತ ಕಲಿತು ಈಗ ರಾಮ್ ಸೀತಾ ಆಲ್ಬಂಗೆ ಸಾಹಿತ್ಯ ಬರೆದು ಸಂಗೀತ ನಿರ್ದೆಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ರಾಮ್ ಸೀತ ಆಲ್ಬಂ VOKZZ PRODUCTIONS ಯು ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಆರು ನಿಮಿಷ ಇರುವ ಈ ಸಾಂಗ್‌ನಲ್ಲಿ ಪ್ರೀತಿ ಪ್ರೇಮದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇರಬೇಕು,ನಂಬಿಕೆ ಹೋಗಿ ಅನುಮಾನ ಜಾಸ್ತಿ ಆದರೆ ಏನೆಲ್ಲ ತೊಂದರೆ ಆಗುತ್ತದೆ ಎಂಬುದನ್ನು ನೋಡಬಹುದು.ಮುಖ್ಯ ಪಾತ್ರದಲ್ಲಿ ಭರತ್ ಮತ್ತು ಭವಾನಿ ಹಾಗೂ ಪ್ರವೀಣ್ ನಟಿಸಿದ್ದು ಇನ್ನೂ ಊಳಿದ ಪಾತ್ರಗಳಲ್ಲಿ ಅರ್ಪಿತ ಹಾಗೂ ಅರ್ಜುನ್ ಗಂಗು ಕಾಣಿಸಿಕೊಂಡಿದ್ದಾರೆ.

ಮೈನು ಐಬಿಎಂ ನಿರ್ದೇಶನದ ಈ ಸಾಂಗ್‌ಗೆ ನರಸಿಂಹ ಛಾಯಗ್ರಹಣವಿದ್ದು, ಜೆ ನವೀನ್ ಮತ್ತು ಪ್ರವೀಣ್ ರಾಯಚೂರು ಸಂಕಲನ ಮಾಡಿದ್ದಾರೆ. ಹಾಡಿನ ಚಿತ್ರೀಕರಣ ರಾಯಚೂರಿನ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.